ಹಿರಿಯ ಬಸ್ ಚಾಲಕ ನಿಧನ
ಉಪ್ಪಳ: ಮೂಲತ: ವರ್ಕಾಡಿ ಕೊಂಡೆವೂರು ನಿವಾಸಿ ಈಗ ಉಪ್ಪಳ ಬಳಿಯ ದಡ್ಡಂಗಡಿಯಲ್ಲಿ ವಾಸವಾಗಿರುವ ಬಸ್ ಚಾಲಕ ಭಾಸ್ಕರ ಶೆಟ್ಟಿ (62) ನಿಧನರಾದರು. ಮಂಗಳವಾರ ರಾತ್ರಿ ಇವರಿಗೆ ಹೃದಯÁಘಾತ ಉಂಟಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿದ ಅಲ್ಪ ಹೊತ್ತಿನಲ್ಲಿಯೇ ನಿಧನ ಸಂಭವಿಸಿದೆ. ಇವರು ಈ ಹಿಂದೆ ದೀರ್ಘಕಾಲ ಮಂಗಳೂರು-ಮುAಬೈಗೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಚಾಲಕರಾಗಿದ್ದರು. ಈಗ ಮಂಗಳೂರಿನ ಖಾಸಗಿ ಕಾಲೇಜು ಬಸ್ ಚಾಲಕರಾಗಿ ದುಡಿಯುತ್ತಿದ್ದರು. ದಿ| ಬಂಟಪ್ಪ ಶೆಟ್ಟಿ -ದಿ| ಕಮಲ ದಂಪತಿ ಪುತ್ರನಾಗಿದ್ದಾರೆ.
ಮೃತರು ಪತ್ನಿ ಚಂದ್ರಾವತಿ, ಮಕ್ಕಳಾದ ಭವ್ಯ, ನವೀನ್ ಕುಮಾರ್, ಅಳಿಯ ಸಂಪತ್, ಸಹೋದರರಾದ ಐತ್ತಪ್ಪ ಶೆಟ್ಟಿ, ಚಿದಂಬರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸಹೋದರಿಯರಾದ ಧರ್ಮಾವತಿ, ಸರ್ವಾಣಿ, ಶೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸAಸ್ಕಾರ ನಿನ್ನೆ ವರ್ಕಾಡಿ ಕೊಂಡೆವೂರು ಮನೆ ಬಳಿಯಲ್ಲಿ ನಡೆಯಿತು.