ಕುಂಬಳೆ: ನಡೆದು ಹೋಗುತ್ತಿದ್ದ ಯುವತಿಯನ್ನು ತಡೆದು ನಿಲ್ಲಿಸಿ ಅಪ್ಪಿ ಹಿಡಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ವಿರುದ್ಧ ಇದೇ ರೀತಿಯ ಇನ್ನೊಂದು ಕೇಸು ದಾಖಲಿಸಲಾಗಿದೆ.
ಕರ್ನಾಟಕದ ಸಕಲೇಶಪುರ ನಿವಾಸಿಯೂ ಕುಂಬಳೆ ಆರಿಕ್ಕಾಡಿ ಕಡವತ್ತ್ನ ಕ್ವಾರ್ಟರ್ಸ್ನಲ್ಲಿ ವಾಸಿಸುವ ಶುಹೈಬ್ (25) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಇದೀಗ ಮತ್ತೊಂ ದು ಕೇಸು ದಾಖಲಿಸಿಕೊಂಡಿದ್ದಾರೆ.
ಮಂಜೇಶ್ವರ ಕಾಲೇಜು ವಿದ್ಯಾರ್ಥಿ ನಿಯಾದ 19ರ ಹರೆಯದ ಯುವತಿ ನೀಡಿದ ದೂರಿನಂತೆ ಶುಹೈಬ್ ವಿರುದ್ಧ ಈಗ ಕೇಸು ದಾಖಲಿಸಲಾಗಿದೆ.
ಕಳೆದ ಜೂನ್ ೫ರಂದು ಬೆಳಿಗ್ಗೆ ಕಾಲೇಜಿಗೆ ತೆರಳಲು ಕುಂಬಳೆ ರೈಲು ನಿಲ್ದಾಣದತ್ತ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ರೈಲು ನಿಲ್ದಾಣ ಬಳಿಕ ತಡೆದು ನಿಲ್ಲಿಸಿ ಬಿಗಿದಪ್ಪಿಕೊಂಡಿರುವುದಾಗಿಯೂ, ಯುವತಿ ಬೊಬ್ಬಿಡಲೆತ್ನಿಸಿದಾಗ ಆರೋಪಿ ಓಡಿ ಪರಾರಿಯಾಗಿ ದ್ದಾನೆಂದು ದೂರಲಾಗಿದೆ. ಈ ತಿಂಗಳ ೨೪ರಂದು ಹಗಲು ಹೊತ್ತಿನಲ್ಲಿ ರೈಲು ನಿಲ್ದಾಣ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಬೇರೊಬ್ಬಳು ಯುವತಿಯನ್ನು ಆರೋಪಿ ಶುಹೈಬ್ ಬಿಗಿದಪ್ಪಿಕೊಂಡಿದ್ದನೆನ್ನಲಾಗಿದೆ. ಈ ವೇಳೆ ಯುವತಿ ಬೊಬ್ಬೆ ಹಾಕಿದಾಗ ಆರೋಪಿ ಓಡಿ ಪರಾರಿಯಾಗಿದ್ದನು. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ರೈಲ್ವೇ ನಿಲ್ದಾಣ ರಸ್ತೆ ಬಳಿಯಿರುವ ಸಿಸಿ ಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾ ಗಿತ್ತು. ಆರೋಪಿಯ ಚಿತ್ರವನ್ನು ಗುರುತಿಸಿಕೊಂಡ ನಾಗರಿಕರು ಆತನಿಗಾಗಿ ಶೋಧ ನಡೆಸುತ್ತಿದ್ದಾಗ ೨೮ರಂದು ರಾತ್ರಿ ಕುಂಬಳೆ ಪೇಟೆಯಲ್ಲಿ ಶುಹೈಬ್ ಪತ್ತೆಯಾಗಿದ್ದನು. ಕೂಡಲೇ ನಾಗರಿಕರು ಆತನನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪ ಡಿಸಿದ್ದು, ಈ ವೇಳೆ ನ್ಯಾಯಾಲಯ ರಿಮಾಂಡ್ ವಿಧಿಸಿತ್ತು.