ಡಾ| ಬಿ.ಎಸ್. ರಾವ್‌ರಿಗೆ ನುಡಿನಮನ
ಕಾಸರಗೋಡು: ಸುಮಾರು ಆರು ದಶಕಗಳ ಕಾಲ ವೈದ್ಯರಾಗಿ ಜನಾನುರಾಗಿಯಾಗಿದ್ದ ಡಾ|ಬಿ.ಎಸ್. ರಾವ್ ಸಜ್ಜನಿಕೆಯ ಸಾಕಾರಮೂರ್ತಿ ಎಂದು ನಿವೃತ್ತ ಮುಖ್ಯೋಪಾಧ್ಯಾಯ ನಾರಾಯ ಣಯ್ಯ ಮಧೂರು ಹೇಳಿ ದರು. ಅವರು ಮಧೂರು ದೇª Àಸ್ಥಾನದ ಪರಿಸರದಲ್ಲಿ ಜರಗಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಮಧೂರು ದೇವಸ್ಥಾನದ ನವೀಕರಣ ಸಮಿತಿಯ ಉಪಾಧ್ಯಕ್ಷ ರಾಗಿ, ನಿರ್ಮಾಣ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದೇವಸ್ಥಾನದ ನವೀಕರಣ ಕಾರ್ಯದಲ್ಲಿ ನಿಸ್ವಾರ್ಥವಾಗಿ ಡಾ|ಬಿ.ಎಸ್.ರಾವ್ ದುಡಿದಿರುವು ದಾಗಿ ಅವರು ಹೇಳಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಮಂಜುನಾಥ ಕಾಮತ್ ಅಧ್ಯಕ್ಷತೆ ವಹಿಸಿದರು. ದೇವಸ್ಥಾನದ ಕಾರ್ಯ ನಿರ್ವಹಣಾದಿsಕಾರಿ ಜಗದೀಶ್ ಪ್ರಸಾದ್ ದೀಪ ಬೆಳಗಿ ಉದ್ಘಾಟಿಸಿದರು. ವೇಣುಗೋಪಾಲ ನಂಬ್ಯಾರ್ ಕಾಂಞAಗಾಡ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಲಕ್ಷ್ಮಣ ಪೆರಿಯಡ್ಕ, ಗಿರೀಶ್ ಸಂಧ್ಯಾ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು. ಜಗದೀಶ್ ಕೂಡ್ಲು ಸ್ವಾಗತಿಸಿ, ನಿರೂಪಿಸಿದರು. ವಿಷ್ಣು ಭಟ್ ಕಕ್ಕೆಪ್ಪಾಡಿ ವಂದಿಸಿದರು.