ಕಾಸರಗೋಡು: ಪಾಣತ್ತೂರು ಮಾಪಿಳಚ್ಚೇರಿಯಲ್ಲಿ ಯುವಕ ತೋಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮಾಪಿಳಚ್ಚೇರಿ ನಿವಾಸಿ ರಾಜೇಶ್ (35) ಮೃತಪಟ್ಟ ಯುವಕ. ನಿನ್ನೆ ಸಂಜೆ ೫ ಗಂಟೆ ವೇಳೆಗೆ ಮನೆ ಸಮೀಪದ ತೋಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಅಜಾಗ್ರತೆಯಿಂದ ತೋಡಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಮಾಹಿತಿ ತಿಳಿದು ರಾಜಪುರಂ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಅಣ್ಣಯ್ಯ ನಾಯ್ಕ್- ಜಯಂತಿ ದಂಪತಿ ಪುತ್ರನಾದ ಮೃತರು ಸಹೋದರ ರಾಜೇಂದ್ರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
