ಕುಂಬಳೆ: ಪೇಟೆಯಲ್ಲಿ ರಸ್ತೆ ಬದಿ ನಡೆಸುತ್ತಿರುವ ವ್ಯಾಪಾರದ ಬಗ್ಗೆ ಪಂಚಾಯತ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ನೀಡಿದವರ ಹೆಸರನ್ನು ಬಹಿರಂಗಪಡಿಸಿದ ಪಂಚಾಯತ್ ಕಾರ್ಯದರ್ಶಿಯ ಕರ್ತವ್ಯಲೋಪದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮಾತೃಸಮಿತಿ ಅಧ್ಯಕ್ಷೆ ವಿನೀಶ ಬಾಲಕೃಷ್ಣನ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯದರ್ಶಿ ತನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿಯೂ ಅವರು ದೂರಿದರು. ಶಾಲಾ ವಿದ್ಯಾರ್ಥಿಗಳು ಸಂಚರಿಸುವ ದಾರಿಯಲ್ಲಿ ವಿದ್ಯಾರ್ಥಿನಿಯರು ಅನುಭವಿಸುವ ಕೆಟ್ಟ ಅನುಭವ ಸಾಮಾನ್ಯವಾದ ಹಿನ್ನೆಲೆಯಲ್ಲಿ ಪಂಚಾಯತ್ಗೆ ತಾನು ದೂರು ನೀಡಿದ್ದು, ನನ್ನ ವಿರುದ್ಧ ಪಿತೂರಿ ನಡೆಸುವುದಕ್ಕೆ ರಾಜಕಾರ ಣಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.