ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಮೃತ್ಯು
ಕುಂಬಳೆ: ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟರು. ಅಂಗಡಿಮೊಗರು ನಿವಾಸಿ ದಿ| ನವೀನ್‌ಚಂದ್ರ ಶೆಟ್ಟಿಯವರ ಪತ್ನಿ ಎನ್. ಸುಲೋಚನ ಶೆಟ್ಟಿ (56) ಮೃತಪಟ್ಟ ದುರ್ದೈವಿ. ಕಳೆದ ತಿಂಗಳ 28ರಂದು ಪುತ್ರನ ಜೊತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಂಗಡಿಮೊಗ ರಿನಲ್ಲಿ ಅಪಘಾತ ಸಂಭವಿಸಿತ್ತು. ಗಾಯಗೊಂಡ ಇವರನ್ನು ಕೂಡಲೇ ಕುಂಬಳೆ ಆಸ್ಪತ್ರೆಗೂ ಬಳಿಕ ಮಂಗಳೂ ರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡ ಲಾಗಿತ್ತು. ಶನಿವಾರ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ ಅಮೃತ್, ಅಭಿಷೇಕ್, ಅಕ್ಷಯ್, ಸಹೋದ ರರಾದ ಚಂದ್ರಶೇಖರ, ಶೇಖರ, ಸಹೋದರಿ ಚಂದ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.