ಅಡುಗೆ ಕೋಣೆಯೇ ಔಷಧಾಲಯ ಆಗಬೇಕು-ಕೊಂಡೆವೂರು ಶ್ರೀ
ಉಪ್ಪಳ: ಅಡುಗೆ ಕೋಣೆಯೇ ಔಷಧಾಲಯ ಆಗಿದ್ದ ಕಾಲವೊಂದು ನಮಗಿತ್ತು. ಆದರೆ ಈಗಿನ ಆಹಾರ ಪದ್ಧತಿಯಿಂದಾಗಿ ಔಷಧಾಲಯವನ್ನು ನಂಬಿಕೊಳ್ಳಬೇಕಾದ ಕೆಟ್ಟ ಪರಿಸ್ಥಿತಿ ಉಂಟಾಗಿದೆಯೆಂದು ಕೊಂಡೆವೂರು ಶ್ರೀ ಯೋಗಾನಂದ ಅಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಕೊಂಡೆವೂರು ಮಠದಲ್ಲಿ ನಡೆದ ಕರ್ಕಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಆಹಾರ ಪದ್ಧತಿಯಲ್ಲಿ ಜನಜಾಗೃತಿ ಮೂಡಿಸಲು ಕರ್ಕಟಕ ಮಾಸದಲ್ಲಿ ನಮ್ಮ ಪರಿಸರದಲ್ಲಿಯೇ ದೊರಕುವ ಗಿಡ, ಬಳ್ಳಿ, ಎಲೆಗಳನ್ನು ಬಳಸಿ ಔಷಧೀಯ ಗಂಜಿ ಎಂಬ ಕಾರ್ಯಕ್ರಮ ಕಳೆದ ಹಲವು ವರ್ಷಗಳಿಂದ ಇಲ್ಲಿ ನಡೆಯುತ್ತಿದೆಯೆಂದು ಅವರು ಅಭಿಪ್ರಾಯಪಟ್ಟರು. ಡಾ| ರಾಧಾಕೃಷ್ಣ ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮಾತ ನಾಡಿ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರು ವುದು ಶ್ಲಾಘನೀಯ ಎಂದರು. ಡಾ| ಸಂದೀಪ್ ಬೇಕಲ್ ಮಠದ ಚಟುವಟಿಕೆಗಳ ಸಂತಸ ವ್ಯಕ್ತಪಡಿಸಿದರು. ಮಾಜಿ ಎಂ.ಎಲ್.ಸಿ. ಮೋನಪ್ಪ ಭಂಡಾರಿ, ರವೀಶ ತಂತ್ರಿ ಕುಂಟಾರು, ಡಾ| ಸುಮಲತಾ ರಾಧಾಕೃಷ್ಣನ್, ಯತಿ ವಿನಯಸಾಗರ್ ಮಧ್ಯಪ್ರದೇಶ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ತೃಶೂರು ಎಂ.ಡಿ. ಸೀತಾರಾಮ ಆಯುರ್ವೇದಿಕ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ವಾಹಕ ನಿರ್ದೇಶಕ ಡಾ| ಡಿ. ರಾಮನಾಥನ್‌ರಿಗೆ ಆಯುಶ್ರೀ ಪ್ರಶಸ್ತಿ ನೀಡಿ ಅಭಿನಂದಿಸಲಾ ಯಿತು. ಔಷಧೀಯ ಗಿಡಮೂಲಿಕೆಗಳ ಕುರಿತು ನಾಟಿ ವೈದ್ಯ ಪವಿತ್ರನ್ ಗುರುಕ್ಕಳ್ ಪ್ರಸ್ತಾಪಿಸಿದರು. ನಾಟಿ ವೈದ್ಯ ಪಿ.ಟಿ. ಅರವಿಂದಾಕ್ಷನ್, ಡಾ| ಗಣೇಶ್ ಕುಮಾರ್ ಮಾಹಿತಿ ನೀಡಿದರು. ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ ಹಾಡಿದರು. ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಅಧ್ಯಕ್ಷ ಜಯದೇವನ್ ಕಣ್ಣೂರು ಸ್ವಾಗತಿಸಿ, ಕೆ.ಎಂ. ಗಂಗಾಧರ್ ವಂದಿಸಿದರು. ದಿನಕರ್ ಹೊಸಂಗಡಿ, ಪ್ರಶಾಂತ್ ತೋಲಂಬರ ನಿರ್ವಹಿಸಿದರು.