ಸ್ವಾತಂತ್ರ್ಯ ದಿನಾಚರಣೆ ಸಚಿವ ಕೆ.ಕೃಷ್ಣನ್ ಕುಟ್ಟಿಯವರಿಂದ ಧ್ವಜವಂದನೆ ಸ್ವೀಕಾರ

ಕಾಸರಗೋಡು:  ಕಾಸರಗೋಡು ನಗರಸಭಾ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ  ದಿನಾಚರಣೆ ಕಾರ್ಯಕ್ರಮ ದಲ್ಲಿ ಸಚಿವ ಕೆ. ಕೃಷ್ಣನ್ ಕುಟ್ಟಿ ಧ್ವಜ ವಂದನೆ ಸ್ವೀಕರಿಸುವರು. ಪರೇಡ್‌ನಲ್ಲಿ 19 ತುಕಡಿಗಳು ಭಾಗವಹಿಸುವುದು. ಎ.ಆರ್. ಕ್ಯಾಂಪ್‌ನ ಅಸಿಸ್ಟೆಂಟ್ ಕಮಾಂ ಡೆಂಟ್ ಪರೇಡ್ ನಿಯಂತ್ರಿಸುವರು. ಜಿಲ್ಲಾ  ಸಶಸ್ತ್ರ ರಿಸರ್ವ್ ಪೊಲೀಸ್, ಲೋಕಲ್ ಪೊಲೀಸ್, ಮಹಿಳಾ ಪೊಲೀಸ್, ಎಕ್ಸೈಸ್ ಎಂಬೀ ಪ್ಲಾಟೂನ್‌ಗಳು, ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ನಾಯಮ್ಮಾರ್‌ಮೂಲೆ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ, ಚೆಮ್ನಾಡ್ ಜಮಾ ಯತ್ ಹೈಯರ್ ಸೆಕೆಂಡರಿ ಶಾಲೆ, ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಸ್ಟುಡೆಂಟ್ಸ್ ಪೊಲೀಸ್, ಕಾಸರಗೋಡು ಸರಕಾರಿ ಕಾಲೇಜಿನ  ಸೀನಿಯರ್ ಡಿವಿಶನ್, ಕಾಞಂಗಾಡ್ ನೆಹರೂ ಆರ್ಟ್ಸ್ ಆಂಡ್ ಸಯನ್ಸ್‌ನ ಸೀನಿಯರ್ ಡಿವಿಶನ್, ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ, ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ, ಚೆಮ್ನಾಡ್ ಸರಕಾರಿ ಹೈಯರ್ ಸೆಕೆಂಡರಿ, ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಎನ್‌ಸಿಸಿ, ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಅಪ್ಪರ್ ಪ್ರೈಮರಿ ಶಾಲೆಯ ಸ್ಕೌಟ್ ಆಂಡ್ ಗೈಡ್, ಪೆರಿಯ ಜವಾಹರ್ ನವೋದಯ ವಿದ್ಯಾಲಯ, ಉಳಿಯತ್ತಡ್ಕ ಜೈಮಾತಾ ಸೀನಿಯರ್ ಸೆಕೆಂಡರಿ ಶಾಲೆಯ ಬ್ಯಾಂಡ್ ಸೆಟ್‌ಗಳು, ಎಸ್‌ಪಿಸಿ ಅಧ್ಯಾಪಕರ ಪ್ಲಾಟೂನ್‌ಗಳು ಪರೇಡ್‌ನಲ್ಲಿ ಭಾಗವಹಿಸಲಿವೆ.

ಅಭ್ಯಾಸ ಪರೇಡ್ 11, 12ರಂದು ಮಧ್ಯಾಹ್ನ ಹಾಗೂ 13ರಂದು ಬೆಳಿಗ್ಗೆ 8 ಗಂಟೆಗೆ ಕಾಸರಗೋಡು ನಗರಸಭಾ ಮೈದಾನದಲ್ಲಿ ನಡೆಯಲಿದೆ.  ೧೫ರಂದು ನಡೆಯುವ ಸ್ವಾತಂತ್ರ್ಯ ದಿನ ಕಾರ್ಯ ಕ್ರಮದಲ್ಲಿ ಜಿಲ್ಲೆಯ ಸ್ವಾತಂತ್ರ ಹೋರಾ ಟಗಾರರು, ಸಂಸದ, ಶಾಸಕರು, ಇತರ ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು,ಸರಕಾರಿ ನೌಕರರು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page