ಬಿಜೆಪಿಯಿಂದ ವರ್ಕಾಡಿ ಪಂ. ಕಚೇರಿಗೆ ಪ್ರತಿಭಟನಾ ಮಾರ್ಚ್
ವರ್ಕಾಡಿ: ಪಂಚಾಯತ್ ಆಡಳಿತ ನಡೆಸುವ ಎಡರಂಗದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು, ದಬ್ಬಾಳಿಕೆ ಪ್ರವೃತ್ತಿ ಕೊನೆಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಯೊಂದಿಗೆ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪಂಚಾಯತ್ಗೆ ಪ್ರತಿಭಟನೆ ಮಾರ್ಚ್ ನಡೆಸಲಾಯಿತು. ಮಜೀರ್ಪಳ್ಳ ಪೇಟೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಮಾರ್ಚ್ ಉದ್ಘಾಟಿಸಿದರು. ಭಾಸ್ಕರ್ ಪೊಯ್ಯೆ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಕಚೇರಿ ಮುಂದೆ ಮಾರ್ಚ್ನ್ನು ಪೊಲೀಸರು ತಡೆದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುರಳೀಧರ ಯಾದವ್, ಮಣಿಕಂಠ ರೈ, ರಮಣಿ, ಸದಾಶಿವ ಮಂಟಮೆ, ದೂಮಪ್ಪ ಶೆಟ್ಟಿ, ರಾಜ್ಕುಮಾರ್ ಶೆಟ್ಟಿ ಮಾತನಾಡಿದರು. ನಾಗೇಶ್ ಬಳ್ಳೂರು, ಕೆ.ವಿ.ಭಟ್, ವಿವೇಕಾನಂದ, ಜಗದೀಶ್ ಚೆಂಡ್ಲ, ಮಮತಾ ಕುಲಾಲ್, ಆಶಾಲತಾ, ಪದ್ಮಾವತಿ, ಶ್ವೇತಾ ಪಾವಳ, ರವಿರಾಜ್, ಆನಂದ್ ತಚ್ಚಿರೆ, ಹರೀಶ್ ಕನ್ನಿಗುಳಿ ನೇತೃತ್ವ ನೀಡಿದರು. ರಕ್ಷಣ್ ಅಡೆಕಳ ಸ್ವಾಗತಿಸಿ, ಯತಿರಾಜ್ ಶೆಟ್ಟಿ ವಂದಿಸಿದರು.