ಮಂಜೇಶ್ವರ: ಕುಂಜತ್ತೂರು ಪದವುನಲ್ಲಿ ವಾಸಿಸುತ್ತಿದ್ದ ಬಿಹಾರ ನಿವಾಸಿಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬಿಹಾರದ ಮೋತಿಹರಿ ಜಿಲ್ಲೆಯ ಹತ್ವಾಹಿ ತಿಕುಲಿಯ ಚಂಬಾರನ್ ಎಂಬಲ್ಲಿನ ಆಶ್‌ದೇವ್ ಚೌದರಿ ಎಂಬವರ ಪುತ್ರ ರಾಹುಲ್ ಕುಮಾರ್ (17) ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಈತನ ಸಹೋದರ ವಿಶಾಲ್ ಕುಮಾರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕುಂಜತ್ತೂರುಪದವಿನಲ್ಲಿರುವ ಫರ್ನೀಚರ್ ಸಂಸ್ಥೆಯಲ್ಲಿ ಈತ ಸಹೋದರ ವಿಶಾಲ್ ಕುಮಾರ್ ನ ಜೊತೆ ಕೆಲಸ ನಿರ್ವಹಿ ಸುತ್ತಿದ್ದನು. ನಿನ್ನೆ ಮುಂಜಾನೆ 1.45ರ ಬಳಿಕ ವಾಸಸ್ಥಳದಿಂದ ರಾಹುಲ್ ಕುಮಾರ್ ನಾಪತ್ತೆ ಯಾಗಿದ್ದಾನೆನ್ನಲಾಗಿದೆ.