ಕಾಸರಗೋಡು: ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕದ ನೂತನ ಅಧ್ಯಕ್ಷರಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ. ಮಲ್ಲಿಕಾರ್ಜುನ ಎಸ್. ನಾಸಿಯವರನ್ನು ಕೇಂದ್ರ ಸಮಿತಿ ಅಧ್ಯಕ್ಷ ಡಾ. ಹಿ.ಚಿ. ಬೋರಲಿಂಗಯ್ಯ ಆಯ್ಕೆ ಮಾಡಿ ಆದೇಶಿಸಿದ್ದಾರೆ. ಮೂಲತಃ ಕಲಬುರ್ಗಿ ಜಿಲ್ಲೆಯವರಾದ ಮಲ್ಲಿಕಾರ್ಜುನ ನಾಸಿ 2004ರಲ್ಲಿ ಕೇರಳದ ಕೊಚ್ಚಿಗೆ ತೆರಳಿದ್ದರು. 2019ರಲ್ಲಿ ಪೋತನಿ ಕ್ಕಾಡ್ ಸೈಂಟ್ಮೇರೀಸ್ ಎಂಬಲ್ಲಿ ಆಸ್ಪತ್ರೆ ಆರಂಭಿಸಿ ಜನಾನುರಾಗಿಯಾ ಗಿದ್ದರು. ಈ ಪ್ರದೇಶದ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ಭಾಷೆ ಸಂಸ್ಕೃತಿ ಬೆಳೆಸಲು ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮುಂಬೈಯಲ್ಲಿ ನಡೆಸಿದ ಹೊರನಾಡ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಗೌರವ ಸಲಹೆಗಾರರಾಗಿ ಪ್ರೊ. ಎ. ಶ್ರೀನಾಥ್, ಎ.ಆರ್. ಸುಬ್ಬಯ್ಯಕಟ್ಟೆ, ಉಪಾಧ್ಯಕ್ಷರಾಗಿ ಮಂಜುನಾಥ ಆಳ್ವ ಮಡ್ವ, ಪ್ರಧಾನ ಕಾರ್ಯದರ್ಶಿಯಾಗಿ ರವಿ ನಾಯ್ಕಾಪು, ಕಾರ್ಯದರ್ಶಿಯಾಗಿ ಮಹಾಲಿಂಗ ಕೆ, ಕೋಶಾಧಿಕಾರಿಯಾಗಿ ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಸದಸ್ಯರಾಗಿ ಗಂಗಾಧರ ತೆಕ್ಕೆಮೂಲೆ, ಮಹೇಶ್ ಪುಣಿಯೂರು, ಸಂಧ್ಯಾಗೀತ ಬಾಯಾರು, ಪುರುಷೋತ್ತಮ ಪೆರ್ಲ ಅಖಿಲೇಶ್ ನಗುಮುಗಂ, ಝಡ್.ಎ. ಕಯ್ಯಾರ್, ಶ್ರೀಕಾಂತ್ ನೆಟ್ಟಣಿಗೆ, ಅಸೀಸ್ ಚೇವಾರ್ ಆಯ್ಕೆಯಾಗಿದ್ದಾರೆ.