ಮೀಯಪದವು: ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ಉಪಖಂಡ ಸಮಿತಿ ಸಂತಡ್ಕ ಮತ್ತು ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಸಹಯೋಗ ದಲ್ಲಿ 22ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ಅರಸು ಸಂಕಲ ಭವನದಲ್ಲಿ ಜರಗಿತು. ಧಾರ್ಮಿಕ ಸಭೆ ಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಬಾಲಸಂಸ್ಕಾರ ಪ್ರಮುಖ್ ಸೌಮ್ಯ ಪ್ರಕಾಶ್ ಮದಂಗಲ್ಲುಕಟ್ಟೆ ಧಾರ್ಮಿಕ ಪ್ರವಚನ ನೀಡಿದರು. ಅರಸುಸಂಕಲ ದೈವಕ್ಷೇತ್ರದ ಅಧ್ಯಕ್ಷ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಕಮಲಾಕ್ಷಿ ಉಪಸ್ಥಿತ ರಿದ್ದರು. ಆಶಾ ಬಿ.ಎಂ. ಸ್ವಾಗತಿಸಿ, ಸಾಹಿತ್ ಶೆಟ್ಟಿ ವಂದಿಸಿದರು. ಸುಶ್ಮಿತಾ ಮಂಜುನಾಥ ಶೆಟ್ಟಿ ನಿರೂಪಿಸಿದರು. ರಾಧಾಕೃಷ್ಣ ಭಟ್ ಕೋಳ್ಯೂರು ಶ್ರೀ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿ ದರು. ಅನ್ನ ಸಂತರ್ಪಣೆ ಜರಗಿತು.
