ರೈಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ ಸಾವು

ಕಾಸರಗೋಡು: ರೈಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ ಬಳಿಕ ಸಾವನ್ನಪ್ಪಿದ ಘಟನೆ ನಡೆದಿದೆ. ತಮಿಳುನಾಡು ಉಳಿಲಾಂಪೆಟ್ಟಿ ಮಲಾಂಪೆಟ್ಟಿ  ನಿವಾಸಿ ಚೆಲ್ಲನ್ ಎಂಬವರ ಪುತ್ರಿ ಸಾರಾ ಚೆಲ್ಲನ್ (10) ಸಾವನ್ನಪ್ಪಿದ ಬಾಲಕಿ. ಮೂಲತಃ ಮಹಾರಾಷ್ಟ್ರ  ನಿವಾಸಿಯಾಗಿದ್ದಾಳೆ.  ಅಸೌಖ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಮಹಾರಾಷ್ಟ್ರದ ರೋಹದಿಂದ ದಾದರ್-ತಿರುನಲ್ವೇಲಿ ಎಕ್ಸ್‌ಪ್ರೆಸ್  ರೈಲಿನಲ್ಲಿ ಮಧುರೈಗೆ ಕೊಂಡೊಯ್ಯ ಲಾಗುತ್ತಿತ್ತು. ಬಾಲಕಿಯ ಜತೆಗೆ ಆಕೆಯ ತಾಯಿಯೂ ಇದ್ದರು. ಪ್ರಯಾಣ ಮಧ್ಯೆ  ಬಾಲಕಿ ಪ್ರಜ್ಞಾಹೀನಗೊಂಡಳು.  ರೈಲು ಹೊಸದುರ್ಗ ನಿಲ್ದಾಣಕ್ಕೆ ತಲುಪಿದಾಗ ಅಲ್ಲಿನ ರೈಲ್ವೇ ಸಿಬ್ಬಂದಿಗಳು ಬಾಲಕಿಯನ್ನು ತಕ್ಷಣ ಅಲ್ಲಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ  ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ರೈಲ್ವೇ ಪೊಲೀಸರು ಮತ್ತು ಹೊಸದುರ್ಗ ಪೊಲೀಸರು ಈ ಬಗ್ಗೆ ಬಾಲಕಿಯ ತಾಯಿಯ ಹೇಳಿಕೆ ದಾಖಲಿಸಿಕೊಂ ಡರು. ಬಾಲಕಿಯ ತಂದೆ ಚೆಲ್ಲನ್ ಮುಂಬೈಯಲ್ಲಿ ದುಡಿಯುತ್ತಿದ್ದಾರೆ. ಮೃತದೇಹವನ್ನು ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು  ತನಿಖೆ ಮುಂದುವರಿಸಿದ್ದಾರೆ.

You cannot copy contents of this page