ಶ್ರೀ ಧೂಮಾವತೀ ದೈವಸ್ಥಾನ ಮಹಾದ್ವಾರ ನಿರ್ಮಾಣಕಾರ್ಯಕ್ಕೆ ಚಾಲನೆ
ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಏರೋಟಿ ಶ್ರೀ ಧೂಮಾವತೀ ದೈವಸ್ಥಾನಕ್ಕೆ ತೆರಳುವ ಮುಖ್ಯ ರಸ್ತೆ ಅಂಚಿಗೆ ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಸರ್ಪಂಗಳ ಗುದ್ದಲಿ ಪೂಜೆ ನೆರವೇರಿಸಿದರು. ಸಂಕಪ್ಪ ರೈ ಬಜಕೂಡ್ಲು, ಬಾಲಕೃಷ್ಣ ರೈ, ಚಂದ್ರಶೇಖರ ಆಚಾರ್ಯ, ಡಾ. ಕೃಷ್ಣಮೋಹನ, ಬಾಲಕೃಷ್ಣ ಕುಲಾಲ್, ದಾಮೋದರ ಬಜಕೂಡ್ಲು, ಕರುಣಾಕರ ಬಕೂಡ್ಲು, ಮಹಾದ್ವಾರ ನಿರ್ಮಾಣ ಸಮಿತಿ ಸದಸ್ಯರು, ಊರವರು ಪಾಲ್ಗೊಂಡಿದ್ದರು. ಭಕ್ತರು ಹಾಗೂ ದಾನಿಗಳ ನೆರವಿನಿಂದ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ನೂತನ ಮಹಾದ್ವಾರ ನಿರ್ಮಾ ಣಗೊಳ್ಳಲಿದ್ದು, ಇದಕ್ಕಾಗಿ ಪ್ರತ್ಯೇಕ ಸಮಿತಿ ಕಾರ್ಯಾಚರಿಸುತ್ತಿದೆ.