ಗಣಿತ ಮೇಳದಲ್ಲಿ ಧರ್ಮತ್ತಡ್ಕ ಶಾಲೆ ಚಾಂಪ್ಯನ್
ಮಂಜೇಶ್ವರ: ಕುಂಜತ್ತೂರು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸ ವದ ಪ್ರೌಢಶಾಲಾ ವಿಭಾಗದ ಗಣಿತ ಮೇಳದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಚಾಂಪಿಯನ್ಶಿಪ್ ಪಡೆದುಕೊಂಡಿದೆ. ಒಟ್ಟು ೯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ೧ರಲ್ಲಿ ದ್ವಿತೀಯ ಹಾಗೂ ೨ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದು ಸ್ಪರ್ಧಾಳುಗಳು ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದುಕೊಂಡರು. ನಂಬರ್ ಚಾರ್ಟ್ ವಿಭಾಗದಲ್ಲಿ ಮನೋಜ್ಞ ಸಿ.ಎಚ್ ಪ್ರಥಮ, ಜಿಯೋಮೆಟ್ರಿಕಲ್ ಚಾರ್ಟ್ ವಿಭಾಗದಲ್ಲಿ ಡಾನಿಕಾ ಪಹಲ್ ಆರ್ ಪ್ರಥಮ, ಅದರ್ ಚಾರ್ಟ್ ವಿಭಾಗದಲ್ಲಿ ಸಾನ್ವಿ ಎಸ್.ವಿ ಪ್ರಥಮ, ಅಪ್ಲೈಡ್ ಕನ್ಟ್ರಕ್ಷನ್ ವಿಭಾಗದಲ್ಲಿ ಕೀರ್ತನಾ ಪ್ರಥಮ, ಗಣಿತ ಪಜಲ್ನಲ್ಲಿ ತನುಷ್ ಬಿ ಶೆಟ್ಟಿ ಪ್ರಥಮ, ಸಿಂಗಲ್ ಪ್ರಾಜೆಕ್ಟ್ನಲ್ಲಿ ಅಕ್ಷಿತ್ರಾಮ್ ಕೆ ಪ್ರಥಮ, ಗ್ರೂಪ್ ಪ್ರಾಜೆಕ್ಟ್ನಲ್ಲಿ ನವ್ಯಶ್ರೀ ಕೆ ಹಾಗೂ ಶವ್ಯಶ್ರೀ ಕೆ ಪ್ರಥಮ, ಸ್ಟಿಲ್ ಮಾಡೆಲ್ನಲ್ಲಿ ಆತ್ಮಿಕಾ ಪ್ರಥಮ, ವರ್ಕಿಂಗ್ ಮಾಡೆಲ್ನಲ್ಲಿ ಅನ್ವಿತಾ ಪಿ ದ್ವಿತೀಯ, ಪ್ಯೂರ್ ಕನ್ಟ್ರಕ್ಷನ್ನಲ್ಲಿ ದೀಕ್ಷಾ ತೃತೀಯ, ಗೇಮ್ಸ್ನಲ್ಲಿ ಅಮೃತಾ ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದರೊಂದಿಗೆ ಟೀಚಿಂಗ್ ಎಯ್ಡ್ನಲ್ಲಿ ಅಧ್ಯಾಪಕ ರಕ್ಷಿತ್ ಕುಮಾರ್ ಎಂ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದುಕೊಂಡರು. ಸ್ಪರ್ಧಾಳುಗಳ ಸಾಧನೆಗೆ ಹಾಗೂ ಸಹಕರಿಸಿದ ಗಣಿತ ಅಧ್ಯಾಪಕವಂದಕ್ಕೆ ವ್ಯವಸ್ಥಾಪಕರು, ರಕ್ಷಕ-ಶಿಕ್ಷಕ ಸಂಘ ಹಾಗೂ ಮುಖ್ಯೋಪಾಧ್ಯಾಯರು ಅಭಿನಂದನೆ ಸಲ್ಲಿಸಿದ್ದಾರೆ.