ಪಿಂಚಣಿ ಕೂಡಾ ನೀಡದೆ ಸರಕಾರದ ದಂದುವೆಚ್ಚ-ರಾಜ್ಯಪಾಲ

ತಿರುವನಂತಪುರ: ಕೇರಳ ಸರಕಾರವನ್ನು ಟೀಕಿಸಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತೆ ರಂಗಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಸೇವೆಗಾಗಿ ಜೀವನವನ್ನು  ಮುಡಿಪಾಗಿಟ್ಟವರಿಗೆ ಪಿಂಚಣಿ ಕೂಡಾ ನೀಡದೆ ಸರಕಾರ ಹಣವನ್ನು ದುಂದು ವೆಚ್ಚ ಮಾಡುತ್ತಿದೆಯೆಂದು ರಾಜ್ಯಪಾಲರು ಆರೋಪಿಸಿದ್ದಾರೆ.  ರಾಜ್ಯ ಭಾರೀ ಆರ್ಥಿಕ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ದರೂ ಸರಕಾರದ ದುಂದು ವೆಚ್ಚಕ್ಕೆ ಯಾವುದೇ ಕಡಿಮೆಯಿಲ್ಲ. ನ್ಯಾಯಾಲಯಕ್ಕೆ ತೆರಳಿ ಆರ್ಥಿಕ ಸಂದಿಗ್ಧತೆಯೆಂದು ತಿಳಿಸುವ ಸರಕಾರ ಮತ್ತೊಂದೆಡೆ ಆಡಂಬರ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಹಣ ದುಂದುವೆಚ್ಚ ಮಾಡುತ್ತಿದೆಯೆಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ ವಿಧಾನಸಭೆ ಮಂಜೂರು ಮಾಡಿದ ಮಸೂz ಗಳಿಗೆ ಅಂಗೀಕಾರ ನೀಡದೆ ಹಿಡಿದಿಟ್ಟುಕೊಂಡ ವಿರುದ್ಧ ರಾಜ್ಯ ಸರಕಾರ ನೀಡಿದ ಅರ್ಜಿ ಮೇಲೆ ಸುಪ್ರೀಂಕೋರ್ಟ್ ನಲ್ಲಿ ಉತ್ತರ ನೀಡುವುದಾಗಿಯೂ ರಾಜ್ಯಪಾಲ ತಿಳಿಸಿದ್ದಾರೆ. ಸಂವಿಧಾನದ ವ್ಯವಸ್ಥೆಗ ಳನ್ನು ಪಾಲಿಸದೆ ಸರಕಾರ ಮಸೂ ದೆಗಳನ್ನು  ಮಂಜೂರು ಮಾಡಿದೆ.  ಮಸೂದೆಗಳಿಗೆ ಸಹಿ ಹಾಕಬೇಕಾ ದರೆ ಮುಖ್ಯಮಂತ್ರಿ ನೇರವಾಗಿ ಸ್ಪಷ್ಟೀಕರಣ ನೀಡಬೇಕೆಂದು ರಾಜ್ಯಪಾಲರು ತಿಳಿಸಿದ್ದಾರೆ.

RELATED NEWS

You cannot copy contents of this page