ಕಾಸರಗೋಡಿನಲ್ಲಿ ಆನ್‌ಲೈನ್ ಸೆಕ್ಸ್ ವ್ಯಾಪಾರ ದಂಧೆಯ ಬಲೆಯಲ್ಲಿ ಸಿಲುಕಿದ ಹಲವು ಪ್ರಮುಖರು
ಕಾಸರಗೋಡು: ಕಾಸರಗೋಡು ಕೇಂದ್ರೀಕರಿಸಿ ಆನ್‌ಲೈನ್ ಸೆಕ್ಸ್ ವ್ಯಾಪಾರ ಸಕ್ರಿಯಗೊಂಡಿದೆ. ಈ ಬಗ್ಗೆ ಲಭಿಸಿದ ಸೂಚನೆಗಳ ಮೇರೆಗೆ ಗುಪ್ತಚರ ವಿಭಾಗಗಳು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿರುವುದಾಗಿ ಹೇಳಲಾಗುತ್ತಿದೆ.
ನಗರದಲ್ಲಿ ಬಹು ಅಂತಸ್ತಿನ ಕಟ್ಟಡವೊಂದನ್ನು ಕೇಂದ್ರೀಕರಿಸಿ ಸೆಕ್ಸ್ ಮಾಫಿಯಾ ಕಾರ್ಯಾಚರಿಸುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ವಾಟ್ಸಪ್ ಬಳಸಿ ಈ ತಂಡ ಚಟುವಟಿಕೆ ನಡೆಸುತ್ತಿದೆ. ಯುವತಿಯರನ್ನು ಬಳಸಿಕೊಂಡು ಪುರುಷರ ಮೊಬೈಲ್ ಫೋನ್‌ಗೆ ಕರೆ ಮಾಡಿ ವ್ಯಾಪಾರಕ್ಕೆ ಆಹ್ವಾನಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಮೊದಲ ಕರೆಯಾದರೆ ಈ ಹಿಂದೆಯೇ ಪರಿಚಯ ಇರುವುದಾಗಿ ತಿಳಿಸಿ ಮಾತುಕತೆ ಆರಂಭಿಸಲಾಗುತ್ತಿದೆ. ಅದರಲ್ಲಿ ವ್ಯಕ್ತಿ ಸಿಲುಕಿಕೊಂಡನೆಂದರೆ ಕರೆ ಮುಂದುವರಿಯುತ್ತದೆ. ಈ ಮಧ್ಯೆ ವ್ಯಕ್ತಿಯ ಹೆಸರು, ನಂಬ್ರವನ್ನು ಸೆಕ್ಸ್ ರ‍್ಯಾಕೆಟ್‌ನ ಮುಖ್ಯಸ್ಥನಿಗೆ ಹಸ್ತಾಂತರಿಸಲಾಗುವುದು. ಮಹಿಳೆಯರ ವಿಷಯಲ್ಲಿರುವ ಆಸಕ್ತಿಗೆ ಸಂಬಂಧಿಸಿ ಪೂರ್ಣ ಮಾಹಿತಿ ಲಭಿಸಿದ ಬಳಿಕ ಕರೆ ಮಾಡುವುದು ದಂಧೆಯ ಮುಖ್ಯಸ್ಥನಾಗಿರುತ್ತಾನೆ. ಯುವತಿಯರ ಬಗ್ಗೆ ಆಸಕ್ತಿ ತಿಳಿಸಿದರೆ ಯಾವ ರೀತಿಯ, ಎಷ್ಟು ಪ್ರಾಯದ ಯುವತಿ ಬೇಕೆಂದು ಪ್ರಶ್ನಿಸಲಾಗುತ್ತದೆ. ಅನಂತರ ಯುವತಿಯರ ಒಂದು ಪಟ್ಟಿಯನ್ನು ಕಳುಹಿಸಿಕೊಡಲಾಗುತ್ತದೆ. ಆ ಪಟ್ಟಿಯಲ್ಲಿ ಮಹಿಳೆಯರ ಪ್ರಾಯ, ಬಣ್ಣ, ಊರು ಮೊದಲಾದವುಗಳನ್ನು ದಾಖಲಿಸಲಾಗಿರುತ್ತದೆ. ಮಹಿಳೆಯರ ಆಯ್ಕೆ ನಡೆದರೆ ಅನಂತರದ ಮಾತುಕತೆ ಬೆಲೆಗೆ ಸಂಬಂಧಿಸಿಯಾಗಿರುತ್ತದೆ. ಗಂಟೆಗಳು, ಪೂರ್ಣ ಹಗಲು, ಅಥವಾ ರಾತ್ರಿ ಎಂಬೀ ರೀತಿಯ ವ್ಯವಸ್ಥೆಯನ್ನು ಅದರಲ್ಲಿ ತಿಳಿಸಲಾಗುತ್ತದೆ. ಹೋಂ ಡೆಲಿವರಿ ಆಗಿದ್ದರೆ ಅದಕ್ಕೂ ಸೌಕರ್ಯ ಒದಗಿಸಿ ಕೊಡಲಾಗುವುದು.
ಬಹು ಅಂತಸ್ತಿನ ಕಟ್ಟಡ ಕೇಂದ್ರೀಕರಿಸಿ ಚಟುವಟಿಕೆ ನಡೆಸುವುದಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಅಲ್ಲಿಗೆ ಕರೆಸದೆ ಸುರಕ್ಷಿತ ಕೇಂದ್ರಗಳಿಗೆ ಆಹ್ವಾನಿಸುವುದು ತಂಡದ ರೀತಿಯಾಗಿದೆಯೆಂದು ಹೇಳಲಾಗುತ್ತದೆ. ನೇಪಾಳ, ಉತ್ತರ ಭಾರತದ ಯುವತಿಯರೂ ತಂಡದಲ್ಲಿರುವುದಾಗಿ ಗುಪ್ತಚರ ಏಜೆನ್ಸಿಗಳು ಪತ್ತೆಹಚ್ಚಿರುವುದಾಗಿ ಹೇಳಲಾಗುತ್ತದೆ. ತಂಡದ ಬಲೆಗೆ ಈಗಾಗಲೇ ಹಲವು ಪ್ರಮುಖರು ಸಿಲುಕಿಕೊಂಡಿರುವುದಾಗಿ ಹೇಳಲಾಗುತ್ತದೆ. ಬಲೆಗೆ ಸಿಲುಕಿದವರಿಂದ ೫೦೦೦ ರೂಪಾಯಿಯಿಂದ ೨೫ ಸಾವಿರ ರೂಪಾಯಿವರೆಗೆ ವಸೂಲು ಮಾಡುತ್ತಿರುವುದಾಗಿಯೂ ಸೂಚನೆಯಿದೆ.