ವಿದ್ಯುತ್ ದರ ಹೆಚ್ಚಳ: ಕುಂಬಳೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಕುಂಬಳೆ: ಬೆಲೆ ಏರಿಕೆ, ಸರಕಾರದ ದುಂದು ವೆಚ್ಚದಿಂದ ಬೆನ್ನೆಲುಬು ತುಂಡಾದ ಕೇರಳೀಯರ ಜನತೆಗೆ ಇನ್ನೊಂದು ಹೊಡೆತವಾ ಗಿದೆ ವಿದ್ಯುತ್ ದರ ಹೆಚ್ಚಳದ ಮೂಲಕ ಸರಕಾರ ನೀಡಿರುವುದೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸುಬ್ಬಯ್ಯ ರೈ ಆರೋಪಿಸಿದರು. ಬ್ಲೋಕ್ ಕಾಂಗ್ರೆಸ್ ಸಮಿತಿ, ಕುಂಬಳೆ ಕೆಎಸ್‌ಇಬಿ ಸೆಕ್ಷನ್ ಕಚೇರಿಗೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬೃಹತ್ ಮೊತ್ತ ಬಾಕಿ ಉಳಿಸಿಕೊಂಡವರಿಂದ ಸಂಗ್ರಹಿಸಲು ಹೆದರುವ ಕೆಎಸ್‌ಇಬಿ ಸರಕಾರ ಜನರಿಗೆ ಹೆಚ್ಚು ಭಾರ ಹೊರಿಸಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ. ನೀಲಕಂಠನ್ ಮುಖ್ಯ ಅತಿಥಿಯಾಗಿದ್ದರು. ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಲೋಕನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸೋಮಪ್ಪ ಸ್ವಾಗತಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ, ನಾಸರ್ ಮೊಗ್ರಾಲ್, ಹರ್ಷಾದ್ ವರ್ಕಾಡಿ, ಕರ್ಷಕ ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ಗಣೇಶ್ ಭಂಡಾರಿ, ಲಕ್ಷ್ಮಣಪ್ರಭು, ಯೂಸುಫ್ ಬಂಬ್ರಾಣ, ಶಾನಿತ್, ಜುನೈದ್ ಉರುಮಿ, ಬಾಬು ಮಂಗಲ್ಪಾಡಿ, ರವಿರಾಜ್, ಸಲೀಂ ಪುತ್ತಿಗೆ, ವಸಂತ ಆರಿಕ್ಕಾಡಿ, ಡಾಲ್ಫಿನ್ ಡಿ’ಸೋಜ ನೇತೃತ್ವ ನೀಡಿದರು. ರವಿ ವಂದಿಸಿದರು.

RELATED NEWS

You cannot copy contents of this page