ನವಕೇರಳ ಸದಸ್ ಬಳಿಕ ಗಣೇಶ್ ಕುಮಾರ್ ಕಡನ್ನಪ್ಪಳ್ಳಿಗೆ ಸಚಿವ ಸ್ಥಾನ

ತಿರುವನಂತಪುರ: ಕೇರಳ ಕಾಂಗ್ರೆಸ್ ನೇತಾರ ಕೆ.ಬಿ. ಗಣೇಶ್ ಕುಮಾರ್ ಹಾಗೂ ಕಾಂಗ್ರೆಸ್ ಎಸ್‌ನ ರಾಮಚಂದ್ರನ್ ಕಡನ್ನಪ್ಪಳ್ಳಿ ಸಚಿವರಾಗಿ ಅಧಿಕಾರಕ್ಕೇರುವುದು ಬಹುತೇಕ ಖಚಿತಗೊಂಡಿದೆ. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಇವರನ್ನು ಸಚಿವರಾಗಿ ನೇಮಿಸಲು ಸಾಧ್ಯತೆ ಇದೆ. ಸಚಿವರಾದ ಆಂಟನಿ ರಾಜು (ಜನಾಧಿಪತ್ಯ ಕೇರಳ ಕಾಂಗ್ರೆಸ್), ಅಹಮ್ಮದ್ ದೇವರ್‌ಕೋವಿಲ್ (ಐಎನ್‌ಎಲ್) ಎಂಬಿವರ ಬದಲಾಗಿ ಈ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗುವುದು. ಒಬ್ಬೊಬ್ಬರು ಶಾಸಕರುಳ್ಳ ಪಕ್ಷಗಳಿಗೆ ತಲಾ ಎರಡೂವರೆ ವರ್ಷ ಸಚಿವ ಸ್ಥಾನ ಹಂಚಿಕೊಡುವ ಬಗ್ಗೆ ಎಲ್‌ಡಿಎಫ್ ಈ ಹಿಂದೆ ಕೈಗೊಂಡ ನಿರ್ಧಾರ ದಂತೆ ಇದು ನಡೆಯಲಿದೆಯೆನ್ನಲಾ ಗುತ್ತಿದೆ. ಈ ತಿಂಗಳ ೨೦ಕ್ಕೆ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟಕ್ಕೆ ಎರಡೂವರೆ ವರ್ಷ   ಪೂರ್ತಿಗೊಳ್ಳಲಿದೆ. ಅದರ ಎರಡು ದಿನ ಮುಂಚೆ ‘ನವಕೇರಳ ಸದಸ್’ ಕಾಸರಗೋಡಿನಲ್ಲ್ಲಿ ಆರಂಭಗೊಳ್ಳಲಿದೆ. ಅನಂತರವೇ ಸಚಿವರ ಬದಲಾವಣೆ ಹಾಗೂ ಹೊಸಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page