ಬಾಲಕಿಗೆ ಕಿರುಕುಳ ನೀಡಿ ಕೊಲೆ: ಆರೋಪಿಗೆ ಶಿಕ್ಷೆ ೧೪ರಂದು
ಕೊಚ್ಚಿ: ಆಲುವದಲ್ಲಿ ಅನ್ಯರಾಜ್ಯ ದಂಪತಿಯ ಪುತ್ರಿಯಾದ ಐದರ ಹರೆಯದ ಬಾಲಕಿಯನ್ನು ಕಿರುಕುಳ ನೀಡಿ ಕೊಲೆಗೈದ ಆರೋಪಿ ಬಿಹಾರ ನಿವಾಸಿಯಾದ ಅಸ್ಫಾಕ್ ಆಲಂ ಎಂಬಾತನಿಗೆ ಎರ್ನಾಕುಳಂ ಪೋಕ್ಸೋ ನ್ಯಾಯಾ ಲಯ ಶಿಕ್ಷೆಯನ್ನು ನವಂಬರ್ ೧೪ರಂದು ಘೋಷಿಸಲಿದೆ.
ಶಿಕ್ಷೆಯ ಕುರಿತು ವಾದ ನಡೆದ ನಿನ್ನೆ ಆರೋಪಿಯನ್ನು ನ್ಯಾಯಾಲಯಕ್ಕೆ ತಲುಪಿಸಲಾಗಿತ್ತು. ಬಿಹಾರ ನಿವಾಸಿಗಳಾದ ದಂಪತಿಯ ಪುತ್ರಿಯ ಮೃತದೇಹ ಜುಲೈ ೨೮ರಂದು ಆಲುವ ಮಾರ್ಕೆಟ್ ಸಮೀಪ ತ್ಯಾಜ್ಯಗಳ ಮಧ್ಯೆ ಪತ್ತೆಯಾಗಿತ್ತು. ಈ ಪ್ರಕರದಲ್ಲಿ ಅಸ್ಫಾಕ್ ಆಲಂನನ್ನು ಬಂಧಿಸಿದ ತನಿಖಾ ತಂಡ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಕೊಲೆಕೃತ್ಯ, ಕಿರುಕುಳ, ಅಪಹರಣ, ಮೃತದೇಹದೊಂದಿಗೆ ಅಗೌರವ ಮೊದಲಾದ ಅಪರಾಧಗಳನ್ನು ಆರೋಪಿಯ ಮೇಲೆ ಹೇರಲಾಗಿದೆ.