ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ ೧೮ ಕೋಳಿಗಳ ಸಹಿತ ೮ ಮಂದಿ ಸೆರೆ

ಕಾಸರಗೋಡು: ಬಂದಡ್ಕ ಪೂಡಂಗಲ್ಲು ಕಾಲನಿಯಲ್ಲಿ ಕೋಳಿಯಂಕ ನಡೆಯುತ್ತಿದ್ದ ಕೇಂದ್ರಕ್ಕೆ ಬೇಡಗಂ ಪೊಲೀಸರು ನಿನ್ನೆ ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕೋಳಿ ಅಂಕಕ್ಕಾಗಿ ಉಪಯೋ ಗಿಸಲಾಗುತ್ತಿದ್ದ ೧೮ ಕೋಳಿಗಳು ಮತ್ತು ೨೦೩೦ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಪೂಡಂಗಲ್ಲು ಪುಷ್ಪಾಕರನ್ (೫೨), ಪಳ್ಳತ್ತುಂಗಾಲು ಮೋಹನನ್ (೫೫), ಶ್ರೀಜಿತ್ ಪಿ.ಕೆ. (೨೭), ಪಾಣತ್ತೂರಿನ ದೀಪಕ್ (೩೦), ಮಾನಿಮೂ ಲೆಯ ಪ್ರಮೋದ್ ಕುಮಾರ್ (೪೬), ಚಾಮಕೊಚ್ಚಿಯ ಸಿ.ಕೆ. ರಾಘವನ್ (೫೦), ಬಂದಡ್ಕದ  ಸುಧೀಶ (೨೫) ಮತ್ತು ಮೋಹನ್ ಕುಮಾರ್ (೨೫) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.

You cannot copy contents of this page