ಅಡೂರು: ಕೃಷಿ ಕಾರ್ಮಿಕರನ್ನು ಸರಕಾರ ಅವಗಣಿಸುತ್ತಿದೆ ಎಂದು ಆರೋಪಿಸಿ ಬಿಎಂಎಸ್ ದೇಲಂಪಾಡಿ ಪಂಚಾಯತ್ ಸಮಿತಿ ಪಂಚಾಯತ್ ಕಚೇರಿ ಮುಂಭಾಗ ಧರಣಿ ನಡೆಸಿದೆ. ಅಸಂಘಟಿತ ಕಾರ್ಮಿಕರ ಸಂಘ್ ಜಿಲ್ಲಾ ಅಧ್ಯಕ್ಷ ಎಂ.ಕೆ. ರಾಘವನ್ ಉದ್ಘಾಟಿಸಿದರು. ಪಂ. ಸಮಿತಿ ಅಧ್ಯಕ್ಷ ಮೋಹನನ್ ಅಧ್ಯಕ್ಷತೆ ವಹಿಸಿದರು. ವಲಯ ಅಧ್ಯಕ್ಷ ಆನಂದ ಸಿ.ಎಚ್, ವಲಯ ಉಪಾಧ್ಯಕ್ಷ ಕುಸುಮ, ಕರ್ಷಕ ಜಿಲ್ಲಾ ಸಮಿತಿ ಸದಸ್ಯೆ ಭಾರ್ಗವಿ ಪಾಂಡಿ ಮಾತನಾಡಿದರು. ಪಂ. ಸಮಿತಿ ಕಾರ್ಯದರ್ಶಿ ಅನಿತ ಮುನಿಯೂರ್ ಸ್ವಾಗತಿಸಿದರು.
