ಶಾಲಾ ವಿದ್ಯಾರ್ಥಿಯ ಕೂದಲು ಕತ್ತರಿಸಿದ ಪ್ರಕರಣ : ಮುಖ್ಯೋಪಾಧ್ಯಾಯಿನಿಯ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾಯಾಲಯ ತಿರಸ್ಕೃತ
ಕಾಸರಗೋಡು: ಶಾಲೆಯಲ್ಲಿ ವಿದ್ಯಾರ್ಥಿಯ ತಲೆಕೂದಲು ಕತ್ತರಿಸಿದ ಪ್ರಕರಣದಲ್ಲಿ ಆರೋಪಿಯಾದ ಮುಖ್ಯೋಪಾಧ್ಯಾಯಿನಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಚಿಟ್ಟಾರಿಕ್ಕಲ್ ಕೋಟ್ಟಮಲಮಾರ್ ಗ್ರಿಗೋರಿಯೋಸ್ ಸ್ಮಾರಕ ಯುಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶೆರ್ಲಿ ಜೋಸೆಫ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಕೆ. ಬಾಲಕೃಷ್ಣನ್ ತಿರಸ್ಕರಿಸಿದ್ದಾರೆ.
ಅಕ್ಟೋಬರ್ ೧೯ರಂದು ವಿದ್ಯಾ ರ್ಥಿಯ ಕೂದಲು ಕತ್ತರಿಸಿದ ಘಟನೆ ನಡೆದಿತ್ತು. ಐದನೇ ತರಗತಿ ವಿದ್ಯಾರ್ಥಿ ತನ್ನ ತಲೆ ಕೂದಲನ್ನು ಉದ್ದಕ್ಕೆ ಬೆಳೆಸಿದ್ದನೆನ್ನಲಾಗಿದೆ. ಅ. ೧೯ರಂದು ಶಾಲೆಯಲ್ಲಿ ಅಸೆಂಬ್ಲಿ ಕಳೆದ ಬಳಿಕ ಸ್ಟಾಫ್ ರೂಮ್‌ನ ಬಳಿಗೆ ವಿದ್ಯಾರ್ಥಿ ಯನ್ನು ಕರೆದೊಯ್ದು ಬಹಿರಂಗವಾಗಿ ಆತನ ಕೂದಲನ್ನು ಪ್ರಾಧ್ಯಾಪಿಕೆ ಶೇರ್ಲಿ ಜೋಸೆಫ್ ಕತ್ತರಿಸಿರುವುದಾಗಿ ದೂರ ಲಾಗಿದೆ. ಇದರಿಂದ ಶೇರ್ಲಿ ಜೋಸೆಫ್ ವಿರುದ್ಧ ಪರಿಶಿಷ್ಟ ಜಾತಿ-ವರ್ಗ ಅತಿಕ್ರಮಣ ತಡೆ, ಜುವೆನೈಲ್ ಜಸ್ಟೀಸ್ ಆಕ್ಟ್ ಪ್ರಕಾರ ಜಾಮೀನು ರಹಿತ ಕಾಯ್ದೆಗಳನ್ನು ಸೇರಿಸಿ ಚಿಟ್ಟಾರಿಕಲ್ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕೇಸು ದಾಖಲಿಸಿಕೊಂಡಿದ್ದ ಬಗ್ಗೆ ತಿಳಿದ ಮುಖ್ಯೋಪಾಧ್ಯಾಯಿನಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿಯ ತಲೆ ಕೂದಲು ಕತ್ತರಿಸಿದ ಸಂಬಂಧ ಮಕ್ಕಳ ಹಕ್ಕು ಆಯೋಗವೂ ಸ್ವತಃ ಕೇಸು ದಾಖಲಿಸಿಕೊಂಡಿತ್ತು. ಸ್ಪೆಶಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್‌ಪಿ ಸತೀಶ್ ಕುಮಾರ್‌ರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮುಖ್ಯೋಪಾಧ್ಯಾಯಿನಿ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಕೊಂಡ ಬಳಿಕ ಅವರನ್ನು ಸೇವೆಯಿಂದ ಅಮಾನತು ಮಾಡ ಲಾಗಿತ್ತು. ಮುಖ್ಯೋ ಪಾಧ್ಯಾಯಿನಿಯ ಜಾಮೀನು ಅರ್ಜಿಯನ್ನು ನ್ಯಾಯಾ ಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ.