ಉಡುಪಿಯಲ್ಲಿ ನಾಲ್ವರ ಕೊಲೆಗೈದ ಆರೋಪಿ ಬಂಧನ
ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಪ್ರತ್ಯೇಕ ತನಿಖಾ ತಂಡ ಸೆರೆ ಹಿಡಿದಿದೆ. ಮಹಾ ರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪ್ರವೀಣ್ ಅರುಣ್ ಚೌಗಾಲೆ ಯಾನೆ ಪ್ರವೀಣ್ ಚೌಗಾಲೆ (೩೫) ಎಂಬಾತನನ್ನು ಬೆಳಗಾವಿಯಿಂದ ಬಂಧಿಸಿರುವುದಾಗಿ ತಿಳಿಸಲಾಗಿದೆ. ನೆಜಾರು ಸಮೀಪದ ಕೆಮ್ಮಣ್ಣು ಹಂಪನಕಟ್ಟೆಯ ನಿವಾಸಿ ನೂರ್ ಮುಹಮ್ಮದ್ರ ಪತ್ನಿ ಹಸೀನ, ಮಕ್ಕಳಾದ ಅಫ್ಸಾನ್, ಐನಾಸ್, ಅಸೀನ್ ಎಂಬಿವರನ್ನು ಕೊಲೆಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಬೆಳಗಾವಿ ರಾಯಭಾಗ ತಾಲೂಕಿನ ಕುಡಚ್ಚಿ ಎಂಬಲ್ಲಿ ಪ್ರವೀಣ್ ಚೌಗಾಲೆಯನ್ನು ಉಡುಪಿ ಡಿವೈಎಸ್ಪಿ ನೇತೃತ್ವದ ಪ್ರತ್ಯೇಕ ತಂಡ ಬೆಳಗಾವಿ ಪೊಲೀಸರ ಸಹಾಯದೊಂದಿಗೆ ಬಂಧಿಸಿದೆ.