ಹದಿನೈದರ ಬಾಲಕಿಗೆ ಕಿರುಕುಳ: ಆರೋಪಿಗಳಿಗಾಗಿ ಶೋಧ ಆರಂಭ
ಕಾಸರಗೋಡು: ಹದಿನೈದರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಬೇಡಗಂ ಪೊಲೀಸರು ದಾಖಲಿಸಿಕೊಂಡು ಸ್ಪೆಶಲ್ ಮೊಬೈಲ್ ಸ್ಕ್ವಾಡ್ ಗೆ ಹಸ್ತಾಂತರಿಸಿದ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಆರಂಭಿಸಲಾಗಿದೆ. ಎಸ್ಎಂಎಸ್ ಡಿವೈಎಸ್ಪಿ ಸತೀಶ್ ಕುಮಾರ್ ಆಲಕ್ಕಾತದ ನೇತೃತ್ವದಲ್ಲಿ ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಶೋಧ ಆರಂಭಿಸಲಾಗಿದೆ.
ತಂದೆ, ಮಗ ಸಹಿತವುಳ್ಳವರು ಆರೋಪಿಗಳಾದ ಪ್ರಕರಣದ ಸಹಿತ ಐದು ಕೇಸುಗಳನ್ನು ಎಸ್ಎಂಎಸ್ಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಗಳ ಹೊರತು ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ಅತಿಕ್ರಮಣ ನಿಯಮವನ್ನು ಸೇರಿಸಿವುದರಿಂದ ಬೇಡಗಂ ಪೊಲೀಸರಿಂದ ತನಿಖೆಯ ಹೊಣೆಗಾರಿಕೆಯನ್ನು ಎಸ್ಎಂಎಸ್ಗೆ ಹಸ್ತಾಂತರಿಸಲಾಗಿದೆ. ಹದಿನೈದರ ಹರೆಯದ ಬಾಲಕಿಯನ್ನು ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿರುವ ಹದಿನೈದು ಮಂದಿ ವ್ಯತ್ಯಸ್ಥ ಸಮಯಗಳಲ್ಲಿ, ವಿವಿಧ ಸ್ಥಳಗಳಲ್ಲಿ ಕಿರುಕುಳ ನೀಡಿರುವುದಾಗಿ ಕೇಸು ದಾಖಲಿಸಲಾಗಿದೆ. ಮೊದಲು ದಾಖಲಿಸಿಕೊಂಡ ಪ್ರಕರಣದ ಆರೋಪಿಗಳಲ್ಲರೂ ಸೆರೆಗೀಡಾಗಿ ರಿಮಾಂಡ್ನಲ್ಲಿದ್ದಾರೆ. ಇತರ ಆರೋಪಿಗಳು ತಲೆಮರೆಸಿಕೊಂಡಿ ದ್ದಾರೆ.
ಐದು ಪ್ರಕರಣಗಳನ್ನು ಎಸ್ಎಂಎಸ್ಗೆ ಹಸ್ತಾಂತರಿಸಿದ ವಿಷಯ ಬಹಿರಂಗಗೊಳ್ಳುವು ದರೊಂದಿಗೆ ಪ್ರಸ್ತುತ ಪ್ರಕರಣದಲ್ಲಿ ಆರೋಪಿಗಳಾದ ತಂದೆ ಹಾಗೂ ಮಗ ಸಹಿತವುಳ್ಳವರು ತಲೆಮರೆಸಿಕೊಂ ಡಿದ್ದಾರೆಂದು ಹೇಳಲಾಗುತ್ತಿದೆ. ಇವರು ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನ ಆರಂಭಿಸಿರುವುದಾಗಿಯೂ ಸೂಚನೆಯಿದೆ.