ಶಬರಿಮಲೆಯಲ್ಲಿ ಬಾಲಕಿಗೆ ಹಾವಿನ ಕಡಿತ

ಶಬರಿಮಲೆ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಆರರ ಹರೆಯದ ಬಾಲಕಿಗೆ ಹಾವಿನ ಕಡಿತವುಂಟಾಗಿದೆ. ಕಾಟಾಕಡದಿಂದ ತಲುಪಿದ ಬಾಲಕಿಗೆ ಹಾವಿನ ಕಡಿತವುಂಟಾಗಿದ್ದು, ಅದೃಷ್ಟವಶಾತ್ ಆರೋಗ್ಯ ಸ್ಥಿತಿ ಉತ್ತಮವಾಗಿದೆಯೆಂದು ತಿಳಿದು ಬಂದಿದೆ. ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ಪ್ರಥಮ ತಿರುವಿನಲ್ಲಿ ಘಟನೆ ನಡೆದಿದೆ. ಬಾಲಕಿಯನ್ನು ಕೋಟ್ಟಯಂ ಮೆಡಿಕಲ್ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಈ ಬಾರಿಯ  ತೀರ್ಥಾಟನೆಗೆ ಕ್ಷೇತ್ರ ಬಾಗಿಲು ತೆರೆದ ಬಳಿಕ ಇದು ಎರಡನೆ ಘಟನೆಯಾಗಿದೆ.

RELATED NEWS

You cannot copy contents of this page