ಉದ್ಯೋಗ ಖಾತರಿ ಯೋಜನೆ ಕಾರ್ಮಿಕರಿಂದ  ಪೈವಳಿಕೆ ಅಂಚೆ ಕಚೇರಿ ಮಾರ್ಚ್

ಪೈವಳಿಕೆ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಉದ್ಯೋಗ ಖಾತರಿ ಕಾರ್ಮಿಕರ ಯೂನಿಯನ್ ಪೈವಳಿಕೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿ ಮುಂಭಾಗದಲ್ಲಿ ಮಾರ್ಚ್, ಧರಣಿ ಸತ್ಯಾಗ್ರಹ ನಡೆಸಲಾಯಿತು.

ಪಂಚಾಯತ್ ಸದಸ್ಯ, ಸಿಪಿಎಂ ನೇತಾರ ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದರು. ಯೂನಿಯನ್‌ನ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಬ್ದುಲ್ಲ ಕೆ. ಉದ್ಘಾಟಿಸಿ ದರು. ಕರ್ಷಕ ಸಂಘದ ನೇತಾರರಾದ ಅಶೋಕ ಭಂಡಾರಿ ಕುಡಾಲ್, ಅಹಮ್ಮದ್ ಹುಸೈನ್ ಪಿ.ಕೆ. ಪೈವಳಿಕೆ, ಸಿಐಟಿಯು ಮುಖಂಡ ಚಂದ್ರನಾಕ್ ಮಾನಿಪ್ಪಾಡಿ ಮಾತನಾಡಿದರು. ಪೈವಳಿಕೆ ಪಂಚಾಯತ್ ಕಚೇರಿ ಬಳಿಯಿಂದ ಪೈವಳಿಕೆ ನಗರದಲ್ಲಾಗಿ ಮೆರವಣಿಗೆ ಸಾಗಿತು. ಯೂನಿಯನ್‌ನ ಪೈವಳಿಕೆ ಪಂಚಾಯತ್ ಸಮಿತಿ ಕಾರ್ಯ ದರ್ಶಿ ಶಾಂಭವಿ ಬಾಯಿಕಟ್ಟೆ ಸ್ವಾಗತಿಸಿ, ದೇವಕಿ ಏದಾರ್ ವಂದಿಸಿದರು.

You cannot copy contents of this page