ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ-ಆರೋಪ: ಕೇಂದ್ರ ವಿ.ವಿ. ಅಧ್ಯಾಪಕ ಅಮಾನತು
ಪೆರಿಯ: ವಿದ್ಯಾರ್ಥಿನಿಯೊಂ ದಿಗೆ ಲೈಂಗಿಕ ಅತಿಕ್ರಮಣ ನಡೆಸಿ ರುವುದಾಗಿ ಲಭಿಸಿದ ದೂರಿನಂತೆ ಕೇಂದ್ರ ವಿಶ್ವವಿದ್ಯಾಲಯದ ಅಧ್ಯಾ ಪಕನನ್ನು ಅಮಾನತು ಮಾಡ ಲಾಗಿದೆ. ಇಂಗ್ಲಿಷ್ ತುಲನಾತ್ಮಕ ಅಧ್ಯಯನ ವಿಭಾಗದ ಅಸಿ. ಪ್ರೊಫೆ ಸರ್ ಇಫ್ತಿಕರ್ ಅಹಮ್ಮದ್‌ರನ್ನು ತನಿಖಾ ವಿಧೇಯವಾಗಿ ಅಮಾನತು ಗೊಳಿಸಲಾಗಿದೆ.
ದೂರಿನ ಕುರಿತು ವಿಶ್ವವಿದ್ಯಾ ಲಯ ಆಂತರಿಕ ಸಮಿತಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ದೂರಿನಲ್ಲಿ ಸತ್ಯಾವಸ್ಥೆ ಇದೆಯೆಂದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಅಧ್ಯಾಪಕ ಎರಡು ವಾರ ತರಗತಿ ನಡೆಸುವುದನ್ನು ತಡೆಹಿಡಿಯಲಾಗಿದೆ. ಅಮಾನತು ಕ್ರಮದ ಮಧ್ಯೆ ಮುಂಚಿನ ಅನುಮತಿಯಿಲ್ಲದೆ ವಿಶ್ವವಿದ್ಯಾಲಯ ಕೇಂದ್ರವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲವೆಂದು ವೈಸ್ ಚಾನ್ಸಲರ್ ಹೊಣೆಗಾರಿಕೆಯುಳ್ಳ ಡಾ. ಕೆ.ಸಿ. ಬೈಜು ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.
ಈ ತಿಂಗಳ ೧೩ರಂದು ದೂರಿಗೆ ಕಾರಣವಾದ ಘಟನೆ ನಡೆದಿದೆ. ಇಂಟರ್ನಲ್ ಪರೀಕ್ಷೆ ವೇಳೆ ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅನುಚಿತವಾಗಿ ಸ್ಪರ್ಶಿಸಿರುವುದಾ ಗಿಯೂ ಅನಂತರ ತರಗತಿಯಲ್ಲಿ ಅಶ್ಲೀಲವಾಗಿ ಮಾತನಾಡಿರುವುದಾಗಿ ವಿದ್ಯಾ ರ್ಥಿನಿಯರು ದೂರು ನೀಡಿದ್ದಾರೆ. ಅಧ್ಯಾಪಕನ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಚಳವಳಿಯೊಂದಿಗೆ ರಂಗಕ್ಕಿಳಿದಿದ್ದು, ಈ ವಿಷಯ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆಡೆಯಾಗಿತ್ತು. ಇದೇ ರೀತಿಯ ಆರೋಪಗಳು ಈ ಹಿಂದೆಯೂ ಅಧ್ಯಾಪಕನ ವಿರುದ್ಧ ಉಂಟಾಗಿ ದೆಯೆಂದು ಹೇಳಲಾಗುತ್ತಿದೆ.