ಮಹಿಳೆ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ರಾತ್ರಿ ಮನೆಯಲ್ಲಿ  ನಿದ್ರಿಸುತ್ತಿದ್ದ ಮಹಿಳೆಯೋ ರ್ವೆ ಇಂದು ಬೆಳಿಗ್ಗೆ ಅಲ್ಲೇ ಪಕ್ಕದ ರೈಲು ಹಳಿ ಬಳಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಹೊಸದುರ್ಗ ಸೌತ್ ಕೊವ್ವಲ್ ಸ್ಟೋರ್‌ನ ಕಂಡತ್ತಿಲ್ ಕುಂಞಿಕಣ್ಣನ್ ಎಂಬವರ ಪತ್ನಿ ಲಕ್ಷ್ಮಿ (೬೫) ಸಾವನ್ನಪ್ಪಿದ ಮಹಿಳೆ.

ಲಕ್ಷ್ಮಿಯವರು ಉದರ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಎರಡು ತಿಂಗಳಿಂದ ಚಿಕಿತ್ಸೆ  ಪಡೆಯುತ್ತಿದ್ದರು. ಐದು ತಿಂಗಳ ಹಿಂದೆ ಅವರಿಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ  ಹೊಟ್ಟೆಗೆ ಟ್ಯೂಬ್ ಅಳವಡಿಸುವ ಚಿಕಿತ್ಸೆಗೊಳ ಪಡಿಸಲಾಗಿತ್ತು. ನಿನ್ನೆ ರಾತ್ರಿ ಅವರು ಮನೆಯಲ್ಲಿ ನಿದ್ರಿಸಿದ್ದರು. ಬಳಿಕ ಇಂದು ಬೆಳಿಗ್ಗೆ ಕುಶಾಲ್‌ನಗರ  ಬಳಿಯ ರೈಲು ಹಳಿಯಲ್ಲಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ರೈಲ್ವೇ ಪೊಲೀಸರು ಈ ಬಗ್ಗೆ ಮೊದಲು  ಮಾಹಿತಿ ನೀಡಿದ್ದರು. ಅದರಂತೆ ಹೊಸದುರ್ಗ ಪೊಲೀಸರು ಆಗಮಿಸಿ ಮೃತದೇಹವನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿದರು. ಮೃತರು  ಮಕ್ಕಳಾದ ಸತಿ, ಜ್ಯೋತಿ, ಅಳಿಯಂದಿರಾದರ ರಾಜೀವನ್, ಸುರೇಶನ್, ರಾಜೇಶ್ ಸಹೋದರ-ಸಹೋದರಿಯರಾದ ಕರುಣಾಕರನ್, ಜಾನು, ಕಾರ್ತಾಯಿನಿ, ರುಕ್ಮಿಣಿ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page