ಕಾಸರಗೋಡು: ಕಲ್ಲಿಕೋಟೆ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಮ್ಸ್ ನಡೆಸಿದ ಕಾರ್ಯಾಚರಣೆ ಯಲ್ಲಿ ವಿದೇಶದಿಂದ ಅನಧಿಕೃತ ವಾಗಿ ಸಾಗಿಸಲಾಗಿದ್ದ ೧೦.೪೭ ಲಕ್ಷ ರೂ. ಮೌಲ್ಯದ ೧೭೦ ಗ್ರಾಂ ಚಿನ್ನವನ್ನು ಪತ್ತೆಹಚ್ಚಿ ವಪಡಿಸಲಾಗಿದೆ.
ಮಸ್ಕತ್ನಿಂದ ಬಂದ ಕಾಸರ ಗೋಡು ಇಸ್ಮಾಯಿಲ್ ಪುತ್ತೂರು ಅಬ್ದುಲ್ಲ (೩೮) ಎಂಬಾತನಿಂದ ಈ ಚಿನ್ನ ವಶಪಡಿಸಲಾಗಿದೆ. ಚಿನ್ನವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಸಾಗಿಸಲಾಗುತ್ತಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.