ನಗರದ ಸಾರಿಗೆ ಸಂಚಾರ ತಡೆ ಪರಿಹಾರಕ್ಕೆ ಅಧಿಕಾರಿಗಳ ಜಂಟಿ ತಪಾಸಣೆ

ಕಾಸರಗೋಡು: ನಗರದ ಸಾರಿಗೆ ತಡೆಯನ್ನು ಹೊರತುಪಡಿಸಲು ಪಾರ್ಕಿಂಗ್ ವ್ಯವಸ್ಥೆ ಸಿದ್ಧಪಡಿಸಲು ನಗರಸಭಾ ಅಧ್ಯಕ್ಷ, ನಗರಸಭಾ ಸುಪರಿಂಟೆಂಡೆಂಟ್, ಇಂಜಿನಿಯರ್, ಪೊಲೀಸ್ ಸಹಿತದ ತಂಡ ಹೊಸ ಬಸ್ ನಿಲ್ದಾಣದಿಂದ ಟ್ರಾಫಿಕ್ ಜಂಕ್ಷನ್‌ವರೆಗೆ ಪರಿಶೀಲನೆ ನಡೆಸಿದೆ. ತಂಡದಲ್ಲಿ ವಿ.ಎಂ. ಮುನೀರ್, ರಾಮಚಂದ್ರನ್, ಎನ್.ಡಿ, ದಿಲೀಶ್, ಜಿ. ಗಂಗಾಧರನ್, ಎಂ.ಎನ್. ಸೌಮ್ಯ, ಎಂ. ಅನಿತ, ಪೊಲೀಸ್ ಅಧಿಕಾರಿ ಗಳಾದ ಸಿಐಪಿ ಅಜಿತ್ ಕುಮಾರ್, ಎಸ್.ಐ. ಸಜಿ ಮೋನ್ ಜಾರ್ಜ್, ಎಎಸ್‌ಐ ಕೆ. ಶಶಿಧರನ್, ಕೆ. ಜಿನಚಂದ್ರನ್, ಟ್ರಾಫಿಕ್ ಎಸ್.ಐ. ಅಜೀಶ್, ಮೋಟಾರು ವಾಹನ ಇಲಾಖೆಯ ಅಸಿಸ್ಟೆಂಟ್ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್ ಸಿ.ವಿ. ಜಿಜೋ ವಿಜಯ್, ವಿಲ್ಲೇಜ್ ಅಸಿಸ್ಟೆಂಟ್ ಕೆ.ಎ. ಮುಹಮ್ಮದ್ ಅನಸ್ ಭಾಗವಹಿಸಿದರು.

You cannot copy contents of this page