ರೈಲ್ವೇ ಹಳಿ ಸಮೀಪ ವಿದ್ಯುತ್ ಕಂಬಕ್ಕೆ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಸಾವಿನಲ್ಲಿ ನಿಗೂಢತೆ

ಮಂಜೇಶ್ವರ: ಮಂಜೇಶ್ವರದಲ್ಲಿ ಯುವಕನೋರ್ವ ನಿಗೂಢ ರೀತಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಸುಮಾರು ನೂರು ಮೀಟರ್ ದೂರದಲ್ಲಿ ರೈಲು ಹಳಿ ಸಮೀಪವಿರುವ ವಿದ್ಯುತ್ ಕಂಬದಲ್ಲಿ  ಮೃತದೇಹ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಹಳಿ ಬದಿಯಲ್ಲಾಗಿ ನಡೆದು ಹೋಗುತ್ತಿದ್ದವರಿಗೆ ಮೃತದೇಹ ಕಂಡುಬಂದಿದೆ.

ಮೃತ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ವ್ಯಕ್ತಿಗೆ ಸುಮಾರು ೪೫ರಿಂದ ೫೦ ವರ್ಷ ಪ್ರಾಯ ಅಂದಾಜಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಮೃತ ವ್ಯಕ್ತಿ ಒಳ ಉಡುಪು ಮಾತ್ರವೇ ಧರಿಸಿದ್ದು, ಬಟ್ಟೆಯಿಂದ ನೇಣು ಬಿಗಿದಿರುವುದಾಗಿ ತಿಳಿದುಬಂದಿದೆ. ನಿನ್ನೆ ರಾತ್ರಿ ಅಥವಾ ಇಂದು ಮುಂಜಾನೆ ಹೊತ್ತಿನಲ್ಲಿ ಈ ಘಟನೆ ನಡೆದಿರಬಹುದೆಂದು ಅಂದಾಜಿಸ ಲಾಗಿದೆ.  ಇಂದು  ಬೆಳಿಗ್ಗೆ ಮೃತ ದೇಹವನ್ನು ಕಂಡವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಪೊಲೀಸರು ಹಾಗೂ ರೈಲ್ವೇ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಇದೇ ವೇಳೆ ವ್ಯಕ್ತಿಯ  ಸಾವಿನಲ್ಲಿ ನಿಗೂಢತೆಗಳಿರುವುದಾಗಿ ಹೇಳಲಾಗುತ್ತಿದೆ.  ಮೃತ ವ್ಯಕ್ತಿಯ ಎರಡೂ ಕಾಲುಗಳಲ್ಲಿ ಗಾಯಗಳು ಹಾಗೂ ಅದರಿಂದ ರಕ್ತ ಒಸರುತ್ತಿರುವುದು ಕಂಡುಬರುತ್ತಿದೆ.  ಈ ಗಾಯಗಳು ಹೇಗೆ ಉಂಟಾಯಿತೆಂದು  ಸಮಗ್ರ  ಮರಣೋತ್ತರ ಪರೀಕ್ಷೆಯಲ್ಲಿ ತಿಳಿಯಬಹುದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page