ಇಚ್ಲಂಗೋಡು ಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ
ಉಪ್ಪಳ: ಇಚ್ಲಂಗೋಡು ಎ.ಎಲ್.ಪಿ ಶಾಲೆಯಲ್ಲಿ ರಾಧಾಕೃಷ್ಣ ಶೆಟ್ಟಿ ಅಕ್ಕಾರಿಹಿತ್ಲು ಅವರಿಗೆ ಸಂತಾಪ ಸೂಚಕ ಸಭೆ ನಡೆಯಿತು. ಶಾಲೆಯ ಆಡಳಿತ ಸಮಿತಿಯ ಕಾರ್ಯದರ್ಶಿ ಎಂ.ಆರ್ ಕೊರಗಪ್ಪ ಶೆಟ್ಟಿ ಮಾತನಾಡಿ ಶಾಲಾ ಆಡಳಿತ ಸಮಿತಿಯ ಸದಸ್ಯರಾಗಿ, ಇಚ್ಲಂಗೋಡಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ನಿರ್ದೇಶಕರಾಗಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿದರು. ಶಾಲಾ ಆಡಳಿತ ಸಮಿತಿಯ ಅಧ್ಯ ಕ್ಷ ದಿವಾಕರ ಆಳ್ವ, ಮುಖ್ಯೋಪಾ ಧ್ಯಾಯ ಜಯರಾಮ ಸಿ ಎಚ್, ಅಧ್ಯಾಪಿಔ್ರ ಭಾರತಿ ಉಪಸ್ಥಿತರಿದ್ದರು.