ಅಕ್ಷರಗಳಿಂದ ಡಾ. ವಿರೇಂದ್ರ ಹೆಗ್ಡೆಯವರ ಭಾವಚಿತ್ರ ರಚಿಸಿ ಹಸ್ತಾಂತರಿಸಿದ ರಾಫಿಯ

ಉಪ್ಪಳ: ವ್ಯಕ್ತಿಗಳ ಹೆಸರು ಹಾಗೂ ಅವರ ಸಾಧನೆಗಳ ಬಗ್ಗೆ ಅಕ್ಷರಗಳನ್ನು ಜೋಡಿಸಿ ನೂರಾರು ಖ್ಯಾತ ವ್ಯಕ್ತಿಗಳ ಭಾವಚಿತ್ರ ರಚಿಸಿ ಪ್ರಶಸ್ತಿಯನ್ನು ಪಡೆದ ಉಪ್ಪಳ ಪತ್ವಾಡಿಯ ನಿವಾಸಿ ರಾಫಿಯಾ ಇರ್ಷಾದ್ ಡಾ.ವಿರೇಂದ್ರ ಹೆಗಡೆ ಯವರ ಭಾವಚಿತ್ರ ರಚಿಸಿ ಗಮನ ಸೆಳೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಂಡೆವೂರಿನ ಶ್ರೀಮಹಿಮಾ ಸ್ವಸಹಾಯ ಸಂಘದ ಸದಸ್ಯೆಯಾದ ಜುಬೈದ ರವರ ಪುತ್ರಿ ರಾಫಿಯಾ ಸಂಘದ ಸದಸ್ಯೆಯರ ಜೊತೆ ಇತ್ತೀಚೆಗೆ ಧರ್ಮಸ್ಥಳ ಕ್ಷೇತ್ರ ಸಂದರ್ಶಿಸಿ ಹೆಗ್ಡೆಯವರನ್ನು ಭೇಟಿ ಯಾಗಿ ರಚಿಸಿದ ಭಾವಚಿತ್ರವನ್ನು ಅವರಿಗೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಈ ಪೊಟೋಗೆ ಹೆಗ್ಡೆಯವÀರು ಸಹಿ ಹಾಕಿ ರಾಫಿಯಾರಿಗೆ ಹಸ್ತಾಂತರಿಸಿದ್ದಾರೆ.

You cannot copy contents of this page