ಭಾರತೀಯ ನ್ಯಾಯ ಸಂಹಿತಾ ಬಿಲ್ ಸೇರಿ ಮೂರು ಕ್ರಿಮಿನಲ್ ಮಸೂದೆಗಳನ್ನು
ಹಿಂಪಡೆದ ಕೇಂದ್ರನವದೆಹಲಿ: ದೇಶದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಲೋಕಸಭೆಯಲ್ಲಿ ಪರಿಚಯಿಸಿದ ಮೂರು ಕ್ರಿಮಿನಲ್ ಕಾನೂನು ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳ ನಂತರ ಕೇಂದ್ರ ಸರಕಾರ ಹಿಂತೆಗೆದುಕೊಂಡಿದೆ.
ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಸೂದೆಗಳ ಹೊಸ ಆವೃತ್ತಿಗಳನ್ನು ರಚಿಸಲಾಗುವುದು. ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಎಂಬ ಮೂರು ಬ್ರಿಟೀಷ್ ಯುಗದ ಕಾನೂನುಗಳನ್ನು ಬದಲಿಸಲು ಭಾರತೀಯ ನ್ಯಾಯ ಸಂಹಿತಾ ಮಸೂದೆ- ೨೦೨೩, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- ೨೦೨೩ ಮತ್ತು ಭಾರತೀಯ ಸಾಕ್ಷರತಾ ಮಸೂದೆ -೨೦೨೩ಗಳನ್ನು ಆಗಸ್ಟ್ ೧೧ರಂದು ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಸೋಕಸಭೆಯಲ್ಲಿ ಪರಿಚಯಿಸಲಾಗಿತ್ತು. ಅದನ್ನು ಈಗ ಹಿಂಪಡೆಯಲಾಗಿದೆ. ಇದರ ಬದಲು ಹೊಸ ಆವೃತ್ತಿಗಳನ್ನು ರಚಿಸುವ ತೀರ್ಮಾನ ಕೇಂದ್ರ ಸರಕಾರ ಕೈಗೊಂಡಿದೆ.