ಸಂತಾನ ಭಾಗ್ಯ: ದಂಪತಿಯಿಂದ ೧೦೦೨ ಮದ್ಯ ಬಾಟ್ಲಿ ಕೊರಗಜ್ಜನಿಗೆ ಸಮರ್ಪಣೆ
ಮಂಗಳೂರು: ಸಂತಾನ ಭಾಗ್ಯವಿಲ್ಲದೆ ವ್ಯಸನದಲ್ಲಿದ್ದ ದಂಪತಿಗೆ ಮಗು ಜನಿಸಿದ ಸಂತೋಷದಿಂದ ಕೊರಗಜ್ಜ ದೈವಕ್ಕೆ ೧೦೦೨ ಬಾಟ್ಲಿ ಮದ್ಯ ಸಮರ್ಪಿಸಿದ್ದಾರೆ.
ಉಡುಪಿಯ ಸ್ವಾಮಿ ಕೊರಗಜ್ಜ ದೈವದ ಕ್ಷೇತ್ರದಲ್ಲಿ ಮದ್ಯ ಸಮರ್ಪಣೆ ನಡೆಸಲಾಗಿದೆ. ಇಲ್ಲಿಗೆ ಸಮೀಪದ ದಂಪತಿ ಮಕ್ಕಳಿಲ್ಲದೆ ಕೊರಗಿ, ಸಂತಾನ ಭಾಗ್ಯಕ್ಕಾಗಿ ಈ ಕ್ಷೇತ್ರದಲ್ಲಿ ಪ್ರಾರ್ಥನೆ ನಡೆಸಿದ್ದರು. ಮಗು ಜನಿಸಿದಂತೆ ೧೦೦೨ ಮದ್ಯ ಬಾಟ್ಲಿ ಸಮರ್ಪಿಸುವುದಾಗಿ ಹರಕೆ ಹೇಳಿದ್ದರು. ಬಳಿಕ ಇವರಿಗೆ ಮಗು ಜನಿಸಿದ್ದು, ಈ ಸಂತೋಷದಲ್ಲಿ ಹರಕೆ ತೀರಿಸಿದ್ದಾರೆ.