ಪಂಚಾಯತ್ ಇಂಜಿನಿಯರ್ನ ನಿರ್ಲಕ್ಷ್ಯ ಕ್ರಮ: ಕೊಡ್ಯಮ್ಮೆಯ ಅಂಗನವಾಡಿ ಕಣ್ಮರೆಯಾಗುವ ಸ್ಥಿತಿಯತ್ತ
ಕುಂಬಳೆ: ತೆಂಗಿನಡ್ಕ ಅಂಗನವಾಡಿ ಕಟ್ಟಡಕ್ಕೆ ಯಾವುದೇ ತೊಂದರೆ ಇಲ್ಲ ವೆಂದೂ ಅದನ್ನು ನವೀಕರಿಸಲು ಸುಮ್ಮನೆ ೧೫ ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿಲ್ಲವೆಂದು ವರದಿ ಸಲ್ಲಿಸಿದ ಕುಂಬಳೆ ಪಂಚಾಯತ್ ಇಂಜಿನಿಯರ್ ಆರು ತಿಂಗಳೊಳಗೆ ಕಟ್ಟಡ ಅಪಾಯ ಕಾರಿ ಸ್ಥಿತಿಯಲ್ಲಿದೆಯೆಂದು ತಿಳಿಸಿ ಮತ್ತೊಂದು ವರದಿ ನೀಡಿದ್ದಾರೆ.
ಇಂಜಿನಿಯರ್ಗಳ ಸಂಶೋ ಧನೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾ ಯತ್ ಮಂಜೂರು ಮಾಡಿದ ಮೊತ್ತ ಲ್ಯಾಪ್ಸ್ ಆಗಿದ್ದು, ಅಲ್ಲದೆ ಅಂಗನವಾಡಿ ಯನ್ನು ಅಪಾಯಕಾರಿಯಾದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾ ಯಿತು. ಹಳೆಯ ಅಂಗನವಾಡಿ ಕಟ್ಟಡದಲ್ಲಿ ಹಸಿರು ಕ್ರಿಯಾ ಸೇನೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದಾಸ್ತಾನಿರಿ ಸುತ್ತಿದೆ. ಕುಂಬಳೆ ಪಂಚಾಯತ್ ೯ನೇ ವಾರ್ಡ್ನ ಕೊಡ್ಯಮ್ಮೆ ತೆಂಗಿನಡ್ಕ ಅಂಗನವಾಡಿಗೆ ಈ ದುರವಸ್ಥೆ ಎದುರಾಗಿದೆ. ೨೫ ಮಕ್ಕಳು ಕಲಿಯುವ ಈ ಅಂಗವಾಡಿ ಇದೇ ಸ್ಥಳದ ರಸ್ತೆ ಬದಿಯಲ್ಲಿರುವ ಅಂಗನವಾಡಿ ಕೊಠಡಿ ಯಲ್ಲಿ ವಾಹನಗಳ ದಟ್ಟಣೆಯುಳ್ಳ ರಸ್ತೆ ಬದಿಯ ಅಂಗನವಾಡಿಯಲ್ಲಿ ಅಧ್ಯಾ ಪಿಕೆಯ ಕಣ್ತಪ್ಪಿದರೆ ಮಕ್ಕಳು ರಸ್ತೆಗಿಳಿಯಲಿದ್ದಾರೆಂದೂ ಅದು ಭಾರೀ ಅಪಾಯಕ್ಕೆ ಕಾರಣವಾಗಲಿದೆಯೆಂದು ರಕ್ಷಕರು ಭಯಪಡುತ್ತಿದ್ದಾರೆ. ಭಯ ಕಾರಣದಿಂದ ಹಲವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವು ದನ್ನು ನಿಲ್ಲಿಸತೊಡಗಿದ್ದಾರೆಂದೂ ಹೇಳಲಾಗುತ್ತಿದೆ. ಹಳೆಯ ಅಂಗನ ವಾಡಿಗೆ ಹೆಚ್ಚು ವರ್ಷಗಳಾಗಿಲ್ಲ.
ಆದರೆ ಕಟ್ಟಡ ನಿರ್ಮಾಣದಲ್ಲಿ ನಡೆದ ಭ್ರಷ್ಟಾಚಾರವೇ ಅದು ಇಷ್ಟು ಬೇಗ ಹಾನಿಗೀಡಾಗಲು ಕಾರಣವೆಂದೂ ಆರೋಪವುಂಟಾಗಿದೆ. ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಹೊಸ ಕಟ್ಟಡಕ್ಕೆ ಜಿಲ್ಲಾ ಪಂಚಾಯತ್ ಧನಸಹಾಯ ಮಂಜೂರು ಮಾಡಿತ್ತು. ಅದಕ್ಕೆ ಪಂಚಾಯತ್ ಇಂಜಿನಿಯರ್ ಅಡ್ಡಗಾಲಿಟ್ಟರೆಂದು ನಾಗರಿಕರು ಹೇಳುತ್ತಿ ದ್ದಾರೆ. ಅದರಿಂದಾಗಿ ಮಕ್ಕಳ ಶಿಕ್ಷಣ, ಪರಿಸರಣೆ ಮೊಟಕುಗೊಳ್ಳುವ ಸ್ಥಿತಿ ಉಂಟಾಗಿ ರುತ್ತದೆಯೆಂದೂ ದೂರಲಾಗಿದೆ.