ಎಂಡಿಎಂಎ ಸಹಿತ ಪುತ್ತಿಗೆ ನಿವಾಸಿ ಸೆರೆ
ಬದಿಯಡ್ಕ: ೯.೦೮ ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆಯಾಗಿದ್ದಾನೆ. ಪುತ್ತಿಗೆ ಕಟ್ಟತ್ತಡ್ಕ, ಎಕೆಜಿ ನಗರದ ಮುಹಮ್ಮದ್ ಹನೀಫ್ (೩೩)ನನ್ನು ಬದಿಯಡ್ಕ ಎಸ್.ಐ. ಅನೂಪ್ ಮತ್ತು ತಂಡ ಸೆರೆಹಿಡಿದಿದೆ. ನಿನ್ನೆ ರಾತ್ರಿ ೭.೧೫ ಗಂಟೆಗೆ ಬದಿಯಡ್ಕ ಬೋಳುಕಟ್ಟೆಯಿಂದ ಈತನನ್ನು ಸೆರೆ ಹಿಡಿಯಲಾಗಿದೆ. ಪೊಲೀಸರು ರಾತ್ರಿ ಕಾಲ ತಪಾಸಣೆ ನಡೆಸುವುದರ ಮಧ್ಯೆ ಬಸ್ ನಿಲ್ದಾಣದಲ್ಲಿ ಸಂಶಯಕರವಾದ ಸನ್ನಿವೇಶದಲ್ಲಿ ಕಂಡುಬಂದ ಮುಹಮ್ಮದ್ ಹನೀಫ್ನನ್ನು ಕಸ್ಟಡಿಗೆ ತೆಗೆದು ತಪಾಸಿಸಿದಾಗ ಮಾದಕ ಪದಾರ್ಥ ಪತ್ತೆಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.