ಯುವತಿಗೆ ಕಾರಿನೊಳಗೆ ಕಿರುಕುಳ: ಆರೋಪಿಗೆ ರಿಮಾಂಡ್

ಕಾಸರಗೋಡು: ಮಗುವಿನ ಚಿಕಿತ್ಸೆಗೆ ಸಹಾಯ ದೊರಕಿಸುವುದಾಗಿ ತಿಳಿಸಿ ಕಾಸರಗೋಡು ನಿವಾಸಿಯಾದ ೩೬ರ ಹರೆಯದ ಯುವತಿಗೆ ಕಾರಿನೊಳಗೆ ಕಿರುಕುಳ ನೀಡಲಾಯಿತೆಂಬ ಪ್ರಕರಣದಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದ್ದು, ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಹೊಸದುರ್ಗ ಕಡಪ್ಪುರ ಬದ್ರಿಯಾ ನಗರ ಚಿರಮ್ಮಲ್ ಹೌಸ್‌ನ ಸಿ.ಎಚ್. ಮಜೀದ್ (೫೦) ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ. ಪ್ರಕರಣಕ್ಕೆ ಕಾರಣವಾದ ಘಟನೆ ಇತ್ತೀಚೆಗೆ ನಡೆದಿದೆ. ಕಾಞಂಗಾಡ್‌ನಿಂದ ಯುವತಿಯನ್ನು ಕಾರಿಗೆ ಹತ್ತಿಸಿ ಕರೆದೊಯ್ದು ತೆಂಗಿನ ತೋಟದಲ್ಲಿ ಕಾರು ನಿಲ್ಲಿಸಿದ ಬಳಿಕ ಕಿರುಕುಳ ನೀಡಲಾಯಿತೆಂದು ದೂರಲಾಗಿದೆ. ಐವರು ಮಕ್ಕಳಿರುವ ತಾಯಿಯಾಗಿರುವ ಯುವತಿಗೆ ಮಜೀದ್‌ನನ್ನು ಹಿಂದಿನಿಂದಲೇ ಪರಿಚಯ ಇದೆಯೆನ್ನಲಾಗಿದೆ. ದೂರಿನಂತೆ  ಮಗುವಿಗೆ ಸೌಖ್ಯವಿಲ್ಲದ ಸಮಯದಲ್ಲಿ ಸಹಾಯವೊದಗಿಸುವ ಹೆಸರಲ್ಲಿ ಯುವತಿಗೆ ಮೋಸ ಮಾಡಿದ್ದಾನೆಂದು ದೂರಲಾಗಿದೆ.

RELATED NEWS

You cannot copy contents of this page