ಚಿನ್ನ ಕಳ್ಳಸಾಗಾಟದಲ್ಲಿ ಕೇರಳ ನಂ.೧

ಕಾಸರಗೋಡು: ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಾಟ ನಡೆಯುವ ರಾಜ್ಯಗಳ ಪೈಕಿ ಕೇರಳ ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದೆ.  ಕಂದಾಯ ಗುಪ್ತಚರ ವಿಭಾಗ (ರೆವೆನ್ಯೂ ಇಂಟೆಲಿಜೆನ್ಸ್) ತಯಾರಿಸಿ  ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದನ್ನು ಉಲ್ಲೇಖಿಸ ಲಾಗಿದೆ.

 ಈ ವರದಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಾಗಿ ವಿದೇಶದಿಂದ ಕೇರಳಕ್ಕೆ ೨೨೯.೫೧ ಕಿಲೋ ಚಿನ್ನ ಕಳ್ಳ ಸಾಗಾಟ ಮೂಲಕ ತಲುಪಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಟ್ಟು ೩೧೭೩ ಪ್ರಕರಣ ಗಳನ್ನು ದಾಖಲಿಸಲಾಗಿದೆ. ವಿಮಾನ ಮಾರ್ಗ ಮತ್ತು ಸಮುದ್ರಮಾರ್ಗ ಮೂಲಕ ಭಾರತಕ್ಕೆ ಚಿನ್ನ ಕಳ್ಳಸಾಗಾಟ ನಡೆಸಲಾಗುತ್ತಿದೆ. ಕೇರಳದ ಬಳಿಕ ಚಿನ್ನ ಕಳ್ಳಸಾಗಾಟದಲ್ಲಿ  ಆ ಅವಧಿಯಲ್ಲಿ ೨೯೫೯ ಪ್ರಕರಣಗಳು ದಾಖಲುಗೊಂ ಡಿರುವ ತಮಿಳುನಾಡು ದ್ವಿತೀಯ ಮತ್ತು ೨೫೨೮ ಪ್ರಕರಣಗಳು ದಾಖಲುಗೊಂ ಡಿರುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಚಿನ್ನ ಕಳ್ಳಸಾಗಾಟಗಾರರಿಗೆ ಕೇರಳ ಪ್ರಧಾನ ಇಷ್ಟದ ಕೇಂದ್ರವಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ತಿರುವನಂತಪುರ, ಕೊಚ್ಚಿ ಮತ್ತು ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕವೇ ವಿದೇಶದಿಂದ ಅತೀ ಹೆಚ್ಚು ಚಿನ್ನ ಕಳ್ಳಸಾಗಾಟ ನಡೆಯುತ್ತಿದೆ. ಈಗ ಅದು ಕಣ್ಣೂರು ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣಕ್ಕೂ ವಿಸ್ತರಿಸಲ್ಪಟ್ಟಿವೆ. ಕೇರಳಕ್ಕೆ ವಿಶೇಷವಾಗಿ ಗಲ್ಫ್ ರಾಷ್ಟ್ರಗಳಿಂದಲೇ ಅತೀ ಹೆಚ್ಚು ಚಿನ್ನ ಕಳ್ಳಸಾಗಾಟ ನಡೆಯುತ್ತಿದೆ. ಕೇರಳದ ವಿಮಾನ ನಿಲ್ದಾಣಗಳಲ್ಲಿ ಅಗತ್ಯದ ಸಿಬ್ಬಂದಿಗಳ ಕೊರತೆ ಇದ್ದರೂ ಅವರು ಸರಿಯಾದ ರೀತಿಯಲ್ಲೇ ತಮ್ಮ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ ಎಂಬ ಅವಕಾಶವಾದ ವನ್ನು ಕಸ್ಟಮ್ಸ್ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮುಂಡಿಸಿದ್ದಾರೆ.

೨೦೨೦ರಲ್ಲಿ ವಿದೇಶದಿಂದ ಕೇರಳಕ್ಕೆ ೪೦೬.೩೯ ಕಿಲೋ ಚಿನ್ನ ಕಳ್ಳಸಾಗಾಟದ ಮೂಲಕ ಸಾಗಿಸಲಾಗಿದೆ. ಅದಕ್ಕೆ ಸಂಬಂಧಿಸಿ ೬೭೨ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ರೀತಿ ೨೦೨೧ರಲ್ಲಿ ೫೮೬.೯೫ ಕಿಲೋ ಚಿನ್ನ ವಶಪಡಿಸಲಾಗಿದ್ದು, ೭೩೮ ಪ್ರಕರಣ ದಾಖಲಿಸಲಾಗಿದೆ. ೨೦೨೨ರಲ್ಲಿ ೭೫೫.೮೧ ಕಿಲೋ ಚಿನ್ನ ವಶಪಡಿಸಲಾಗಿದ್ದು, ೧,೦೩೫ ಕಿಲೋ ಪ್ರಕರಣ ದಾಖಲಿಸಲಾಗಿದೆ. ಇನ್ನು ೨೦೨೩ ಅಕ್ಟೋಬರ್ ತನಕ ೫೪೨.೩೬ ಕಿಲೋ ಚಿನ್ನ ವಶಪಡಿಸ ಲಾಗಿದ್ದು, ಇದಕ್ಕೆ ಸಂಬಂಧಿಸಿ ೭೨೮ ಪ್ರಕರಣಗಳು ದಾಖಲುಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page