ಬಿಜೆಪಿ ಜಿಲ್ಲಾಧ್ಯಕ್ಷರಿಂದ ಪುತ್ತಿಗೆ ಪಂ. ಪರ್ಯಟನೆ
ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರ ಪಂಚಾಯತ್ ಯಾತ್ರೆಯಂತೆ ಪುತ್ತಿಗೆ ಪಂಚಾಯತ್‌ನ ಹಿರಿಯ ಕಾರ್ಯಕರ್ತರನ್ನು, ಸಾಮಾ ಜಿಕ, ಧಾರ್ಮಿಕ ಮುಂದಾಳು ಗಳನ್ನು ಭೇಟಿ ಮಾಡಿದರು. ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಿಂದ ಪ್ರಾರಂಭಗೊಂಡು ಧರ್ಮತ್ತಡ್ಕ ನೆರಿಯ ಲಕ್ಷ್ಮೀನಾರಾಯಣ ಭಟ್, ರಾಮ ಗೌಡ ಗುರುಸ್ವಾಮಿ, ಮೇಪೋಡು, ಬಾಡೂರು ಕಮಲಸಿರಿ ಮನೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ವಿಮರ್ಶಕ ಬಾಡೂರು ಎನ್ ಸುಬ್ರಹ್ಮಣ್ಯ, ಮುಗು ಪರಿಸರದ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಕುಂಬಳೆ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಸ್ವಾಗತ್ ಸೀತಾಂಗೋಳಿ, ಎಸ್‌ಟಿ ಮೋರ್ಛಾ ಅಧ್ಯಕ್ಷ ವಿಶ್ವನಾಥ ಜಿ, ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಕಣ್ಣೂರು, ಮಾಧವ ಧರ್ಮತ್ತಡ್ಕ, ಅವಿನಾಶ್ ಧರ್ಮತ್ತಡ್ಕ, ಪುತ್ತಿಗೆ ಪಂ. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಬಾಡೂರು, ಭರತ್ ಬಾಡೂರು, ಕೃಷ್ಣ ಪ್ರಸಾದ್ ಅಮೆತ್ತೋಡು, ಜಯಂತಿ ಹಳೆಮನೆ, ಹರೀಶ್ ಚೇರಾಲ್, ದಿವಾಕರ ಆಚಾರ್ಯ ಸೀತಾಂಗೋಳಿ, ಶಿವಾ ನಂದ ಆಚಾರ್ಯ, ಮನೋಹರನ್ ಕಾಮನಬಯಲು ಸಹಿತ ಹಲವು ಕಾರ್ಯಕರ್ತರು ಭಾಗವಹಿಸಿದರು. ವಾರ್ಡ್ ಮಟ್ಟದಲ್ಲಿ ಜಿಲ್ಲಾಧ್ಯಕ್ಷರನ್ನು ವಾರ್ಡ್‌ನ ಸಮಿತಿ ಅಧ್ಯಕ್ಷರು ಸ್ವಾಗತಿಸಿದರು.