ಹಮಾಸ್ ಬಗ್ಗೆ ನೀಡಿದ ಹೇಳಿಕೆ ತಿದ್ದಲಾರೆ-ತರೂರ್

ತಿರುವನಂತಪುರ:  ಮುಸ್ಲಿಂ ಲೀಗ್ ನೇತೃತ್ವದಲ್ಲಿ ಇತ್ತೀಚೆಗೆ ಕಲ್ಲಿಕೋಟೆಯಲ್ಲಿ ಪಾಲೆಸ್ತಿನ್ ಬೆಂಬಲಿಸಿ ನಡೆಸಿದ ರ‍್ಯಾಲಿಯಲ್ಲಿ ನಾನು ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಹಮಾಸ್ ಬಗ್ಗೆ ನೀಡಿದ ಹೇಳಿಕೆಯನ್ನು ನಾನು ತಿದ್ದೆನೆಂದು  ಸಂಸದ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.

ನಾನು ನನ್ನ ಪಕ್ಷದ ನಿಲುವನ್ನೇ ಹೇಳಿದ್ದೇನೆ. ಗಾಝಾ ವಿಷಯದಲ್ಲಿ ಎಲ್ಲಾ ಸಮಯದಲ್ಲೂ ನಾನು ಒಂದೇ ನಿಲುವು ಹೊಂದಿದ್ದೇನೆ. ನಾನು ವಿಶ್ವಸಂಸ್ಥೆಯ ಸದಸ್ಯನಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ವ್ಯಕ್ತಿಯೂ ಆಗಿದ್ದೇನೆ. ಆದ್ದರಿಂದ ಗಾಝಾ ಬಿಕ್ಕಟ್ಟಿನ ಬಗ್ಗೆ ನನಗೆ ಯಾರೂ ಕಲಿಸುವುದು ಬೇಡ. ಯುದ್ಧ ನಿಲ್ಲಿಸಿ ಪರಿಹಾರ ಸಮಸ್ಯೆಗೆ ಕಂಡುಕೊಳ್ಳಬೇಕೆಂದು ಅವರು ಹೇಳಿದ್ದಾರೆ.

ಕಲ್ಲಿಕೋಟೆಯಲ್ಲಿ ಮುಸ್ಲಿಂ ಲೀಗ್‌ನ ರ‍್ಯಾಲಿಯಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಹಮಾಸ್ ಒಂದು ಭಯೋತ್ಪಾದಕ ಸಂಘಟನೆಯಾಗಿದೆಯೆಂದು ತರೂರ್ ಹೇಳಿದ್ದರು. ಅದು ಮುಸ್ಲಿಂ ಲೀಗ್‌ನಲ್ಲಿ ಭಾರೀ ವಿರೋಧಕ್ಕೂ ದಾರಿ ಮಾಡಿಕೊಟ್ಟಿತ್ತು. ಮಾತ್ರವಲ್ಲ  ಸಿಪಿಎಂ ಕೂಡಾ ಅದನ್ನು ಯುಡಿಎಫ್ ವಿರುದ್ಧ ಒಂದು ಅಸ್ತ್ರವನ್ನಾಗಿಯೂ ಬಳಸಿತ್ತು. ಆ ಬಗ್ಗೆ ತರೂರ್ ತನ್ನ ಈ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದು, ಅದೂ ರಾಜಕೀಯ ಇರಿಸುಮುರಿಸಿಗೆ ದಾರಿಮಾಡಿಕೊಟ್ಟಿದೆ.

RELATED NEWS

You cannot copy contents of this page