ತಲೆಗೆ ಸುತ್ತಿಗೆಯಿಂದ ಬಡಿದು ತಂದೆಯ ಕೊಲೆ

ಕೊಲ್ಲಂ:  ಸುತ್ತಿಗೆಯಿಂದ ತಲೆಗೆ ಹೊಡೆದು ತಂದೆಯನ್ನು ಕೊಲೆಗೈದ ಪುತ್ರ ಸೆರೆಯಾಗಿದ್ದಾನೆ. ಮನ್ನಾಟ್ ನಿವಾಸಿ ರವೀಂದ್ರನ್ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿ ಪುತ್ರ ಅಖಿಲ್‌ನನ್ನು ಬಂಧಿಸಲಾಗಿದೆ. ರವೀಂದ್ರನ್‌ನ ಮಾಲಕತ್ವದಲ್ಲಿರುವ ಫ್ಯಾನ್ಸಿ ಅಂಗಡಿಯಲ್ಲಿ ಕೊಲೆ ನಡೆದಿದೆ. ಅಂಗಡಿಗೆ ತಲುಪಿದ ಪುತ್ರನೊಂದಿಗೆ ವಾಗ್ವಾದ ಉಂಟಾಗಿ ಬಳಿಕ ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ತಲೆಗೆ ಗಂಭೀರ ಗಾಯಗೊಂಡ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

You cannot copy contents of this page