ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹ ಅಯೋಧ್ಯೆಯಲ್ಲಿ  ಪ್ರತಿಷ್ಠೆ

ಅಯೋಧ್ಯೆ: ಇಲ್ಲಿನ ಶ್ರೀರಾಮ ಕ್ಷೇತ್ರದಲ್ಲಿ  ಈ ತಿಂಗಳ  ೨೨ರಂದು ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್  ನಿರ್ಮಿಸಿದ್ದಾರೆ. ಇವರು ಕೆತ್ತಿದ ಬಾಲರಾಮನ ವಿಗ್ರಹವನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯ್ಕೆ ಮಾಡಿದೆ. ಇವರು ಇದುವರೆಗೆ ಕೆತ್ತಿದ ಮೂರನೇ ಅದ್ಭುತ ಶಿಲ್ಪ ಇದಾಗಲಿದೆ. ಈ ಮೊದಲು ಹೊಸದಿಲ್ಲಿಯ ಇಂಡ್ಯ ಗೇಟ್‌ನಲ್ಲಿ ಸ್ಥಾಪಿಸಿದ ನೇತಾಜಿ ಸುಭಾಷ್‌ಚಂದ್ರ ಬೋಸ್, ಕೇದಾರನಾಥದಲ್ಲಿರುವ ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಇವರು ಕೆತ್ತಿದ್ದಾರೆ. ಶ್ರೀರಾಮನ ವಿಗ್ರಹವನ್ನು ಕೆತ್ತಲು ಇವರು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಲ್ಲನ್ನು ಬಳಸಿದ್ದಾರೆನ್ನಲಾಗಿದೆ.

You cannot copy contents of this page