ಕೇರಳ ಪೆನ್ಶನರ್ಸ್ ಸಂಘ ಜಿಲ್ಲಾ ಸಮ್ಮೇಳನ
ಹೊಸಂಗಡಿ: ಕೇರಳ ಪೆನ್ಶನರ್ಸ್ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಇತ್ತೀಚೆಗೆ ವಾಮಂಜೂರು ಶ್ರೀ ಗುರುನರಸಿಂಹ ಸಭಾ ಭವನದಲ್ಲಿ ನಡೆಯಿತು. ಸಮಿತಿ ಜಿಲ್ಲಾಧ್ಯಕ್ಷ ಮುತ್ತುಕೃಷ್ಣನ್ ಕೆ ಅಧ್ಯಕ್ಷತೆ ವಹಿಸಿದರು. ಕುಟುಂಬ ಪ್ರಬೋಧನ್ ದ.ಕ. ಸಂಚಾಲಕ ಸುಬ್ರಾಯ ನಂದೋಡಿ ಅತಿಥಿಯಾಗಿ ಭಾಗವಹಿಸಿದರು. ಸಂಘದ ರಾಜ್ಯ ಕೋಶಾಧಿಕಾರಿ ಜಯಭಾನು ಉದ್ಘಾಟಿಸಿದರು. ಆದರ್ಶ್ ಬಿ ಎಂ, ದಿನೇಶ್ ಬಿ ಎಂ, ವೆಂಕಪ್ಪ ಶೆಟ್ಟಿ, ಈಶ್ವರ ರಾವ್ ಶುಭ ಕೋರಿದರು. ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಬಾಳಿಕೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಬಾಬು ನೀಲೇಶ್ವರ ವಂದಿಸಿದರು.
ಪ್ರತಿನಿಧಿ ಸಮ್ಮೇಳನ, ನೂತನ ಪದಾಧಿಕಾರಿಗಳ ಆಯ್ಕೆ ಜರಗಿತು. ಮುತ್ತುಕೃಷ್ಣನ್ ಅಧ್ಯಕ್ಷರಾ ಗಿಯೂ, ಶ್ರೀಧರ ರಾವ್ ಎಂ, ಬಾಬು ಎಂ, ಶಾಂತ ಕುಮಾರಿ, ಕೇಶವ ಭಟ್ ಉಪಾಧ್ಯಕ್ಷರುಗಳಾಗಿಯೂ, ನಾಗರಾಜ ಬಾಳಿಕೆ ಕಾರ್ಯದರ್ಶಿಯಾಗಿ, ಸತ್ಯನಾರಾಯಣ ತಂತ್ರಿ ಜೊತೆಕಾರ್ಯ ದರ್ಶಿಯಾಗಿ, ಕೇಶವಪ್ರಸಾದ್ ಕೋಶಾಧಿಕಾರಿಯಾಗಿಯೂ ಆಯ್ಕೆಯಾದರು.