ಬೀದಿ ಬದಿ ನಾಯಿಗಳ ಗುಂಪು ಆತಂಕಗೊಂಡ ಜನತೆ

ಉಪ್ಪಳ: ಬೀದಿ ನಾಯಿಗಳ ವಿಷಯದಲ್ಲಿ ಸುಪ್ರೀಂಕೋರ್ಟ್ ನಿರ್ಣಾಯಕ ಆದೇಶ ನೀಡಿದ ಹಿನ್ನೆಯಲ್ಲಿ ದೇಶದಾದ್ಯಂತ ಬೀದಿ ನಾಯಿಗಳ ಆಕ್ರಮಣದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಉಪ್ಪಳ, ಉಪ್ಪಳ ಗೇಟ್, ಭಗವತೀ ಗೇಟ್, ವಾಮಂಜೂರು ಚೆಕ್‌ಪೋಸ್ಟ್, ಹೊಸಂಗಡಿ ಮೊದಲಾದ ರಾಷ್ಟಿçÃಯ ಹೆದ್ದಾರಿ ಹಾಗೂ ಒಳ ಪ್ರದೇಶಗಳಲ್ಲಿಯೂ ಬೀದಿ ನಾಯಿಗಳು ವ್ಯಾಪಕಗೊಂಡಿದೆ. ಇದರಿಂದ ಶಾಲಾ ಮಕ್ಕಳು ಸಹಿತ ಜನರ ಸಂಚಾರಕ್ಕೆ ಆತಂಕ ಉಂಟಾಗಿರುವುದಾಗಿ ದೂರಲಾಗಿದೆ. ವಾಮಂಜೂರು ಚೆಕ್‌ಪೋಸ್ಟ್ ಬಳಿಯ ಹೆದ್ದಾರಿಯಲ್ಲಿ 10ಕ್ಕಿಂತ ಅಧಿಕ ಬೀದಿ ನಾಯಿಗಳ ಗುಂಪು ಸವಾರಿ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. ತ್ಯಾಜ್ಯವಿರುವ ಪ್ರದೇಶದಲ್ಲಿ ಪರಸ್ಪರ ಕಚ್ಚಾಡಿಕೊಳ್ಳುವುದು, ವಾಹನಗಳ ಎದುರಿಗೆ ಅಡ್ಡಾದಿಡ್ಡಿಯಾಗಿ ಓಡುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಸಂಬAಧಪಟ್ಟ ಅಧಿಕಾರಿ ವರ್ಗ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳದಿ ರುವುದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.

You cannot copy contents of this page