ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪೀಕರಿಸಿದ ಕುಲಾಲ ಸಮಾಜದ ‘ನೊಂದ ಜೀವಕ್ಕೊಂದು ಆಸರೆ’ ಯೋಜನೆಯಂತೆ 10ನೇ ಸಹಾಯವನ್ನು ಕುಲಾಲ ಸಂಘ ಮೀಂಜ ಶಾಖೆಯ ಮದಂಗಲ್ಲುಕಟ್ಟೆ ಗೌರಿಮೂಲೆ ಜಯರಾಜ್‌ರ ಚಿಕಿತ್ಸೆಗಾಗಿ ಹಸ್ತಾಂತ ರಿಸಲಾಯಿತು. ತೂಮಿನಾಡಿನಲ್ಲಿರುವ ಜಿಲ್ಲಾ ಕುಲಾಲ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಮನ್ನಿಪ್ಪಾಡಿ ಹಸ್ತಾಂತರಿಸಿದರು. ಹಲವಾರು ಗಣ್ಯರು ಉಪಸ್ಥಿತರಿದ್ದರು.
