ಕಾಸರಗೋಡು: ನಗರಸಭೆಯ ಸಿಡಿಎಸ್‌ನ ನೇತೃತ್ವದಲ್ಲಿ 18ನೇ ವಾರ್ಡ್ ಅಮೈ ಬಯಲಿನಲ್ಲಿ ಮಳೆ ಕೊಯ್ಲು ನಡೆಸಲಾಯಿತು. ಹೊಸ ತಲೆಮಾರನ್ನು ಕೃಷಿಗೆ ಆಕರ್ಷಿಸುವ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಅಮೈ ಬಯಲಿನ ಮೂರು ಎಕ್ರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿ ಕೃಷಿ ಕೈಗೊಳ್ಳಲಾಗಿದೆ. ಸಂಸದ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು.
ಆಯಿಷಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಯಾಗಿದ್ದರು. ಶಂಸೀದಾ ಫಿರೋಸ್, ಸಹೀರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ವಿಮಲ ಶ್ರೀಧರ್, ಅಬ್ದುಲ್ ಜಲೀಲ್, ಉಣ್ಣಿ ಕೃಷ್ಣನ್, ಜಯಚಂದ್ರನ್, ಪಿ.ಪಿ. ಅನುಶ್ರೀ, ಎಂ.ವಿ. ಭವ್ಯ, ದೇವಯಾನಿ, ಪ್ರಿಯಾಮಣಿ, ಅರ್ಚನ, ಸ್ಥಳೀಯರು ಸಹಿತ ಹಲವರು ಭಾಗವಹಿಸಿದರು. ಶಾಹಿದಾ ಯೂಸಫ್ ಸ್ವಾಗತಿಸಿ, ಆಶಾ ವಂದಿಸಿದರು.