ಅತ್ತೆಯ ಗುಣನಡತೆಯಲ್ಲಿ ದೋಷ ಆರೋಪಿಸಿ ಕೊಂದು 19 ತುಂಡುಗಳಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ದಂತವೈದ್ಯ

ತುಮಕೂರು: ಗುಣ ನಡತೆಯಲ್ಲಿ ದೋಷ ಆರೋಪಿಸಿ ಪುತ್ರಿಯ ಪತಿ ದಂತವೈದ್ಯರಾಗಿರುವ ವ್ಯಕ್ತಿ ಅತ್ತೆಯನ್ನು ಕೊಂದು ಮೃತದೇಹವನ್ನು 19 ತುಂಡುಗಳ ನ್ನಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ಧಾರುಣ ಘಟನೆ ನಡೆದಿದೆ. ಪ್ರಕರಣದಲ್ಲಿ ಅಳಿಯ ಸಹಿತ ಮೂರು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಡಾ| ರಾಮ ಚಂದ್ರಪ್ಪ ಎಸ್. ಹಾಗೂ ಇತರ ಇಬ್ಬರು ಸಹಾಯಕರು ಸೆರೆಯಾದ ವರಾಗಿದ್ದಾರೆ. ತುಮಕೂರಿನ ಬೆಲ್ಲಾವಿ ನಿವಾಸಿಯಾದ ಲಕ್ಷ್ಮಿದೇವಿ ಅಮ್ಮ ಕೊಲೆಗೀಡಾ ದವರು. ಕಳೆದ ೭ರಂದು  ಬೀದಿನಾಯಿ ಮನುಷ್ಯನ ಕೈಯ ಅವಶಿಷ್ಟವನ್ನು ಕಚ್ಚಿಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆಯಲ್ಲಿ 10 ಕಡೆಗಳಿಂದ ಮೃತದೇಹದ ತುಂಡುಗಳನ್ನು ಪತ್ತೆಹಚ್ಚಲಾಗಿದೆ. 42ರ ಹರೆಯದ ಲಕ್ಷ್ಮಿದೇವಿ ಅಮ್ಮ ಈ ತಿಂಗಳ ೪ರಿಂದ ನಾಪತ್ತೆಯಾಗಿದ್ದರು. ಪುತ್ರಿಯನ್ನು ನೋಡಲೆಂದು ತೆರಳಿದ ಪತ್ನಿ ಹಿಂತಿರುಗಿ ಬರಲಿಲ್ಲವೆಂದು ಇವರ ಪತಿ ಬಸವರಾಜು ಪೊಲೀಸರಿಗೆ ದೂರು ನೀಡಿದ್ದರು.  ಲಕ್ಷ್ಮಿದೇವಿ ಅಮ್ಮರ ಗುಣನಡತೆ ಸರಿಯಿಲ್ಲದಿರುವುದು ತನಗೆ ಅಪಮಾನವಾಗುತ್ತಿದೆ ಎಂದು ಆರೋಪಿಸಿ ಅಳಿಯ ಕೊಲೆಗೈದಿದ್ದಾ ನೆನ್ನಲಾಗಿದೆ. ಸಹಾಯಕರಾದ ಸತೀಶ್ ಕೆ.ಎನ್, ಕಿರಣ್ ಕೆ.ಎಸ್. ಎಂಬಿವ ರೊಂದಿಗೆ ಈತ ಕೊಲೆ ನಡೆಸಿದ್ದಾನೆನ್ನ ಲಾಗಿದೆ. ಸಂಶಯ ಬರದಿರಲು ಮೃತದೇಹವನ್ನು 19 ತುಂಡುಗಳನ್ನಾಗಿ ಮಾಡಿ 10 ಕಡೆಗಳಲ್ಲಿ ಉಪೇಕ್ಷಿಸಿದ್ದರು.

ತುಮಕೂರಿನ ಚಿಂಬುಗನಹಳ್ಳಿ ಯಲ್ಲಿ ಕಳೆದ ಗುರುವಾರ ಸ್ಥಳೀಯ ನಿವಾಸಿ ಪೊದೆಗಳೆಡೆಯಿಂದ ಬರುತ್ತಿದ್ದ ನಾಯಿಯೊಂದು ಮನುಷ್ಯನ ಕೈಯ ಅವಶಿಷ್ಟವನ್ನು ಕಚ್ಚಿಕೊಂಡು ಬರುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ತಪಾಸಣೆ ನಡೆಸಿ ಮೂರು ಕಿಲೋ ಮೀಟರ್ ವ್ಯಾಪ್ತಿಯ ಹತ್ತೆಡೆಗಳಿಂದಾಗಿ ಮನುಷ್ಯ ಶರೀರದ ಬೇರೆ ಬೇರೆ ಭಾಗಗಳನ್ನು ಪತ್ತೆಹಚ್ಚಿದ್ದಾರೆ.

ಕೊರಟಗರೆ, ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸ್ಥಳಗಳಿಂದ ಮೃತದೇಹದ ತುಂಡುಗಳನ್ನು ಪತ್ತೆಹಚ್ಚಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರರ ವಿಧಾನಸಭಾ ಮಂಡಲದಲ್ಲಿ ಸಂಭವಿಸಿದ ಈ ಕೊಲೆ ಕೃತ್ಯ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ತನಿಖೆಗಾಗಿ ಪ್ರತ್ಯೇಕ ತನಿಖಾ ತಂಡವನ್ನು ರೂಪೀಕರಿಸಿದ್ದರು. ಕೊಲೆ ಹಾಗೂ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.

You cannot copy contents of this page