ಸುಂಕ ವಿವಾದ ಮಧ್ಯೆ ಪ್ರಧಾನಿ ಮೋದಿ ಮುಂದಿನ ತಿಂಗಳು ಅಮೆರಿಕ ಭೇಟಿ

ನವದೆಹಲಿ: ಅಮೆರಿಕಾದ ಜೊತೆ ಸುಂಕದ ಸಂಘರ್ಷ ನಡೆಯುತ್ತಿರುವ ಮಧ್ಯದಲ್ಲೇ ಪ್ರಧಾನಮಂತ್ರಿ ನರೇಂದ್ರಮೋದಿ ಮುಂದಿನ ತಿಂಗಳು ಅಮೆರಿಕಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು  ಸಂಬಂಧಪಟ್ಟ ಮೂಲಗಳು ತಿಳಿಸಿವೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆ (ಯುಎನ್‌ಜಿಎ) ಮುಂದಿನ ತಿಂಗಳು ಅಮೆರಿಕಾದಲ್ಲಿ ನಡೆಯಲಿದ್ದು, ಅದರಲ್ಲಿ  ಪ್ರಧಾನಮಂತ್ರಿ ಮೋದಿ ಭಾಗವಹಿಸುವ ಸಾಧ್ಯತೆ ಇದೆ.  ಈ ಸಾಮಾನ್ಯ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೈನ್ ಅಧ್ಯಕ್ಷ ಝೆಲ್‌ನ್ಸ್ಕಿ ಸೇರಿದಂತೆ ಉನ್ನತ ಮಟ್ಟದ ನಾಯಕರು ಭಾಗವಹಿಸು ವರು. ಯುಎನ್‌ಜಿಎ ಶೃಂಗ ಸಭೆ ನ್ಯೂಯಾರ್ಕ್ ನಗರದಲ್ಲಿ ಸೆಪ್ಟಂಬರ್ 23ರಿಂದ ಆರಂಭಗೊಳ್ಳಲಿದೆ. ಒಂದು ವೇಳೆ ಮೋದಿ ಅಮೆರಿಕಾಕ್ಕೆ ಭೇಟಿ ನೀಡಿದಲ್ಲಿ ಅವರು ಅಮೆರಿಕಾ ಅಧ್ಯಕ್ಷರನ್ನು ಭೇಟಿಯಾಗುವರೇ ಎಂಬ ಕುತೂಹಲವೂ ಎಲ್ಲರಲ್ಲೂ ಉಂಟಾಗಿದೆ.

ತನ್ನ ಅಧ್ಯಕ್ಷತೆಯ ಮೊದಲ ಅವಧಿಯಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು  ಪ್ರಧಾನಿ ಮೋದಿ ವೈಯಕ್ತಿಕ ಬಾಂಧವ್ಯ ಬೆಳೆಸಿಕೊಂ ಡರು. ಆ ವೇಳೆ ಮೋದಿಯವರನ್ನು  ಫ್ರೆಂಡ್ಸ್ ಎಂದು ಟ್ರಂಪ್ ಹಲವು ಬಾರಿ ಕರೆದಿದ್ದರು. ಆದರೆ ಎರಡನೇ ಬಾರಿ ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೇರಿದ ನಂತರ ಭಾರತದ ವಿರುದ್ಧ ಟ್ರಂಪ್ ಅಮಿತ ಸುಂಕ ಹೇರುವ ಮೂಲಕ ಭಾರತದೊಂ ದಿಗಿನ ಉತ್ತಮ ರೀತಿಯ ಬಾಂಧವ್ಯವನ್ನು ಹದಗೆಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ  ಅವರು ಪಾಕಿಸ್ಥಾನದೊಂದಿಗೆ  ಇನ್ನಷ್ಟು ನಿಕಟ ನೀತಿಯನ್ನು ಅನುಸರಿಸತೊಡಗಿ ದ್ದಾರೆ. ಇದೆಲ್ಲವೂ  ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯಕ್ಕೆ ಧಕ್ಕೆ ಉಂಟುಮಾಡಿದೆ. ಇದೇ ವೇಳೆಯಲ್ಲಿ  ಪ್ರಧಾನಿ ಮೋದಿ ಮುಂದಿನ ತಿಂಗಳು  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅಮೆರಿಕಾ ಸಂದರ್ಶನ ನಡೆಸಿದಲ್ಲಿ ಅದರಿಂದ ಭಾರತ ಮತ್ತು ಅಮೆರಿಕಾ ನಡುವಿನ  ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ಭಾರತೀಯ ಉತ್ಪನ್ನಗಳ ಮೇಲಿನ ಟ್ರಂಪ್ ಹೇರಿರುವ ಶೇ. 50 ಸುಂಕ ಅಗೋಸ್ತ್‌ನಿಂದಲೇ ಜ್ಯಾರಿಗೆ ಬಂದಿದೆ. ಉಳಿದವುಗಳು ಅಗೋಸ್ತ್ 27ರಿಂದ ಜ್ಯಾರಿಗೆ ಬರಲಿದೆ. ಆ ಗಡುವಿನ ಮೊದಲು ವ್ಯಾಪಕ ಸಮಸ್ಯೆಗಳಿಗೆ ಪರಿ ಹಾರ ಕಂಡುಕೊಳ್ಳುವ ಪ್ರಯತ್ನ ಗಳನ್ನು ಉಭಯ ದೇಶಗಳು ಆರಂಭಿಸಿದೆ.

You cannot copy contents of this page